ಏಷ್ಯನ್ ಗೇಮ್ಸ್​​ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಆತ್ಮಹ* | Neeraj Yadav

ಮೂರು ಬಾರಿ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಮಂಗಳವಾರ(ಅ. 27) ರಾತ್ರಿ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಏಷ್ಯನ್ ಗೇಮ್ಸ್​​ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಆತ್ಮಹ* | Neeraj Yadav
Published on: 

ನವದೆಹಲಿ: ಮೂರು ಬಾರಿ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಮಂಗಳವಾರ(ಅ. 27) ರಾತ್ರಿ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ಮುಖ್ಯ ತರಬೇತುದಾರ ಎಸ್ ಸತ್ಯನಾರಾಯಣ ಅವರು ನೀರಜ್ ಸಾವನ್ನು ಧೃಡಪಡಿಸಿದ್ದಾರೆ. 42 ವರ್ಷದ ಅಥ್ಲೀಟ್ ಎಫ್ 55 ವಿಭಾಗದಲ್ಲಿ ಹಲವಾರು ಬಾರಿ ಸ್ಪರ್ಧಿಸಿದ್ದರು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಇತ್ತೀಚೆಗೆ ಅವರನ್ನು ಡೋಪಿಂಗ್ ಪ್ರಕರಣದಲ್ಲಿ ಅಮಾನತುಗೊಳಿಸಿದ ಹಿನ್ನೆಲೆ ಜಪಾನ್‌ನ ನಗೋಯಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ನೀಡಿರಲಿಲ್ಲ. ಇದರಿಂದಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಇನ್ನೂ ಡೋಪಿಂಗ್ ಅಮಾನತು ತೆಗೆದುಹಾಕದ ಕಾರಣ ಅವಕಾಶಗಳು ಕಡಿಮೆ ಎಂದು ಭಾವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ.

Also Read
₹1,358ರಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಜಿಯೋ ಷೇರುಗಳು: ಲಿಸ್ಟಿಂಗ್ ಸಮಾರಂಭದಲ್ಲಿ ಭಾವುಕರಾದ ಮುಕೇಶ್ ಅಂಬಾನಿ | Mukesh Ambani
ಏಷ್ಯನ್ ಗೇಮ್ಸ್​​ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಆತ್ಮಹ* | Neeraj Yadav

ಭಾರತದ ನಿಪುಣ ಪ್ಯಾರಾ-ಅಥ್ಲೀಟ್​​ಗಳಲ್ಲಿ ಒಬ್ಬರಾಗಿದ್ದ ನೀರಜ್, ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಜಕಾರ್ತಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದರೆ, ಬಳಿಕ 2023ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತ ಎರಡರಲ್ಲೂ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು.

ಏಳನೇ ವಯಸ್ಸಿನಲ್ಲಿ ಪೋಲಿಯೊ ನಂತರದ ಪಾರ್ಶ್ವವಾಯು ಸಮಸ್ಯೆಗೆ ಒಳಗಾದ ಯಾದವ್, ಆರಂಭದಲ್ಲಿ ವೀಲ್‌ಚೇರ್ ಟೆನ್ನಿಸ್ ಆಡುತ್ತಿದ್ದರು. ಬಳಿಕ ಅವರು ಪ್ಯಾರಾ-ಅಥ್ಲೆಟ್ ಆಗಿ ಬದಲಾದರು. ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದರು. ಅವರ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net