ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಿಶಾಂತ್ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದ್ದು, ಇದು ಬಿಹಾರದ ಆಡಳಿತಾರೂಢ ಮೈತ್ರಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ನಿಶಾಂತ್ ಕುಮಾರ್ ರಾಜಕೀಯ ಪ್ರವೇಶಕ್ಕೆ ಬಿಜೆಪಿ ವರಿಷ್ಟರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ನಿತೀಶ್ ಕುಮಾರ್ ಈಗ ತಮ್ಮ ಪುತ್ರನನ್ನೇ ರಾಜಕೀಯಕ್ಕೆ ತರುತ್ತಿರುವುದು ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದ್ದರೂ, ಜೆಡಿಯು ಕಾರ್ಯಕರ್ತರಲ್ಲಿ ಮಾತ್ರ ಈ ನಿರ್ಧಾರವು ಹೊಸ ಹುಮ್ಮಸ್ಸು ತಂದಿದೆ(ಏಜೆನ್ಸೀಸ್).