ಪಲಾಶ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇ ಸ್ಮೃತಿ ಮದ್ವೆ ನಿಲ್ಲಲು ಕಾರಣ! ಮದ್ವೆ ದಿನವೇ ನಡೆದ ಕಹಿ ಘಟನೆ ಬಿಚ್ಚಿಟ್ಟ ಬಾಲ್ಯದ ಗೆಳೆಯ..Smriti Mandhana

Smriti Mandhana
Smriti Mandhana
Published on
ಮುಂಬೈ: ( Smriti Mandhana) ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಈಗ ದೊಡ್ಡ ಸಂಚಲನ ಮೂಡಿಸಿದೆ. ಇಲ್ಲಿಯವರೆಗೆ, ಆಂತರಿಕ ಘರ್ಷಣೆಗಳಿಂದಾಗಿ ಮದುವೆ ರದ್ದಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ ಎಂಬುವವರು ಪಲಾಶ್ ಮುಚ್ಚಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸ್ಮೃತಿ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ವಿವಾಹ ಸಂಭ್ರಮಾಚರಣೆಯ ಸಮಯದಲ್ಲಿ ಪಲಾಶ್ ಅವರು ಇನ್ನೊಬ್ಬ ಮಹಿಳೆಯೊಂದಿಗೆ ಮಲಗುವ ಕೋಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂದು ಮಾನೆ ಆರೋಪಿಸಿದ್ದಾರೆ. ಅಲ್ಲಿದ್ದ ಸ್ಮೃತಿ ಅವರ ಸಹ ಆಟಗಾರ್ತಿಯರೆಲ್ಲರೂ ಕೋಪಗೊಂಡು ಪಲಾಶ್ ಅವರನ್ನು ಹೊಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ನವೆಂಬರ್ 23 ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ ಪಲಾಶ್ ಅವರ ಈ ಕೃತ್ಯದಿಂದಾಗಿ ಮದುವೆ ಕೊನೆ ಕ್ಷಣದಲ್ಲಿ ರದ್ದಾಗಿದೆ. ಪಲಾಶ್ ಈ ರೀತಿ ಸಿಕ್ಕಿಬಿದ್ದಾಗ ಅಲ್ಲಿದ್ದ ಮಹಿಳಾ ಕ್ರಿಕೆಟರ್‌ಗಳು ಆಕ್ರೋಶಗೊಂಡು ಅವರಿಗೆ ಧರ್ಮದೇಟು ನೀಡಿದ್ದಾರೆ ಎಂಬ ವಿಷಯವನ್ನು ಮಾನೆ ಬಹಿರಂಗಪಡಿಸಿದ್ದಾರೆ.
ಕೇವಲ ವೈಯಕ್ತಿಕ ಜೀವನ ಮಾತ್ರವಲ್ಲದೆ, ಹಣಕಾಸಿನ ವಿಚಾರದಲ್ಲೂ ಪಲಾಶ್ ಕುಟುಂಬ ವಂಚಿಸಿದೆ ಎಂದು ಮಾನೆ ಆರೋಪಿಸಿದ್ದಾರೆ. ಸಿನಿಮಾ ಹೂಡಿಕೆಯ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂಪಾಯಿ ಪಡೆದು ಈಗ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ಸಂಬಂಧ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಪಲಾಶ್ ಮುಚ್ಚಲ್ ನಿರಾಕರಿಸಿದ್ದಾರೆ. ವಿಜ್ಞಾನ್ ಮಾನೆ ಹೇಳುತ್ತಿರುವುದೆಲ್ಲಾ ಸುಳ್ಳು ಮತ್ತು ತಮ್ಮ ಇಮೇಜ್ ಹಾಳು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಕಾನೂನು ರೀತಿ ಇದನ್ನು ಎದುರಿಸುವುದಾಗಿ ಅವರು ಹೇಳಿದ್ದಾರೆ.
ಈ ವಿವಾದದ ಬಗ್ಗೆ ಸ್ಮೃತಿ ಮಂಧಾನ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಗೆಳೆಯ ನೀಡಿರುವ ಈ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net