ವರದಿಗಳ ಪ್ರಕಾರ, ಬಾಬರ್ ಅಜಮ್, ರಿಜ್ವಾನ್, ಶಾಹೀನ್ ಶಾ ಅಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್ ಮತ್ತು ಇತರರು ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸುವ ಆಶಯದೊಂದಿಗೆ ಲಕ್ಷ ರೂ. ಹೂಡಿಕೆ ಮಾಡಿದರು. ಇವರಲ್ಲದೆ ಇತರ ಕೆಲವು ಹಿರಿಯ ಮತ್ತು ಕಿರಿಯ ಆಟಗಾರರು ಕೂಡ ಇದರಲ್ಲಿ ಹಣ ಹೂಡಿದ್ದರು ಎನ್ನಲಾಗಿದೆ. ಈ ಆಟಗಾರರು ಹೂಡಿಕೆ ಮಾಡಿದ್ದ ಹಣದ ಮೊತ್ತ ಸರಿಸುಮಾರು 100 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಅಧಿಕ ಲಾಭದ ಆಸೆಗೆ ಬಿದ್ದು ಈ ಹಗರಣದಲ್ಲಿ ಹಣ ತೊಡಗಿಸಿದ್ದರು ಎಂದು ತಿಳಿದುಬಂದಿದೆ.