ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ, ಪಾಕಿಸ್ತಾನದ ಸಚಿವರು ತಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಪಶು ದೇಶವೆಂದು ಬಿಂಬಿಸಿ, ತಮ್ಮದು ಪಾಪದ ದೇಶ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಇಲ್ಲಿ ಸತ್ಯ ಸಂಗತಿ ಏನೆಂದರೆ, ಭಾರತ ಸಿಂಧೂ ನದಿ ನೀರಿನ ಹರಿವನ್ನು ಸಂಪೂರ್ಣವಾಗಿ ಬಂದ್ ಮಾಡಿಲ್ಲ. ಸಿಂಧೂ ನದಿ ಮತ್ತು ಅದರ ಉಪನದಿಗಳ ಹರಿವು ಈಗಲೂ ಎಂದಿನಂತೆ ಪಾಕಿಸ್ತಾನದ ಕಡೆಗೆ ಹರಿಯುತ್ತಿದೆ.