ವಿಚಾರಣೆಯ ಅವಧಿಯಲ್ಲಿ ಎಎಸ್‌ಐ ಸಲ್ಲಿಸಿದ 2,000 ಪುಟಗಳ ವರದಿಯು ಅತ್ಯಂತ ನಿರ್ಣಾಯಕವಾಗಿತ್ತು. ಈ ವರದಿಯ ಪ್ರಕಾರ, ಪ್ರಸ್ತುತ ಇರುವ ರಚನೆಯು ಮಸೀದಿಗಿಂತ ಹಳೆಯದಾದ ಬೃಹತ್ ದೇವಸ್ಥಾನದ ಘಟಕಗಳನ್ನು ಬಳಸಿ ನಿರ್ಮಿಸಲಾಗಿದೆ ಎಂಬುದು ಪತ್ತೆಯಾಗಿದ್ದು, ಸಮೀಕ್ಷೆಯ ವೇಳೆ ದೊರೆತ ನಾಣ್ಯಗಳು, ಶಿಲ್ಪಗಳು ಮತ್ತು ಶಾಸನಗಳು ಇದು ಮೂಲತಃ ದೇವಾಲಯವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದವು. ಮುಸ್ಲಿಂ ಕಡೆಯವರು ಈ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿದರೂ, ಎಎಸ್‌ಐ ಇದನ್ನು ನಿರಾಕರಿಸಿ ಮುಸ್ಲಿಂ ತಜ್ಞರನ್ನೂ ಒಳಗೊಂಡ ತಂಡವು ಪಾರದರ್ಶಕವಾಗಿ ಸಮೀಕ್ಷೆ ನಡೆಸಿದೆ ಎಂದು ಸ್ಪಷ್ಟಪಡಿಸಿತ್ತು. ಮಾರ್ಚ್ 22 ರಿಂದ ಜುಲೈ 15 ರವರೆಗೆ ನಡೆದ 98 ದಿನಗಳ ಸಮಗ್ರ ಸಮೀಕ್ಷೆಯ ಬಳಿಕ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು, ಇದು ಈಗ ಹೈಕೋರ್ಟ್‌ನ ಐತಿಹಾಸಿಕ ತೀರ್ಪಿಗೆ ಬಲವಾದ ತಳಹದಿಯಾಗಿದೆ ಎಂದು ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).