ಪೊಲೀಸರು ತಪಾಸಣೆ ನಡೆಸಿದಾಗ ಕೊಠಡಿಯಲ್ಲಿ ಕೆಲವು ಲೈಂಗಿಕ ಉತ್ತೇಜಕ ಮಾತ್ರೆಗಳ ಖಾಲಿ ಪ್ಯಾಕೆಟ್‌ಗಳು ಹಾಗೂ ಹೆಲ್ತ್ ಸಪ್ಲಿಮೆಂಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ರೋಹಿತ್ ಅಂದು ತನ್ನ ನಿಶ್ಚಿತ ವಧುವನ್ನು ಭೇಟಿಯಾಗಲು ಆಹ್ವಾನಿಸಿದ್ದನು. ಆಕೆಯ ಬರುವಿಕೆಗಾಗಿ ಕಾಯುತ್ತಿದ್ದ ರೋಹಿತ್, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ಸೇವಿಸಿದ್ದ ಎನ್ನಲಾಗಿದೆ. ಆದರೆ, ಈ ಮಾತ್ರೆಗಳ ಅತಿಯಾದ ಸೇವನೆಯಿಂದ (Overdose) ತೀವ್ರ ಹೃದಯಾಘಾತ ಸಂಭವಿಸಿ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.