ಅಯೋಧ್ಯೆ ರಾಮಮಂದಿರ ಟ್ರಸ್ಟ್ ಸಿಇಒ ಹುದ್ದೆಗೆ 5,300ಕ್ಕೂ ಹೆಚ್ಚು ಜನ ಅರ್ಜಿ: 18 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆ | Ram Mandir Trust CEO

ಅಯೋಧ್ಯೆಯ ರಾಮಮಂದಿರ
ಅಯೋಧ್ಯೆಯ ರಾಮಮಂದಿರ
Published on
ಲಖನೌ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ(Ram Mandir Trust CEO) ಶೀಘ್ರದಲ್ಲೇ ನೇಮಕಾತಿ ನಡೆಯಲಿದ್ದು, ಆಯ್ಕೆ ಪ್ರಕ್ರಿಯೆಯು ಅಂತಿಮ ಹಂತವನ್ನು ತಲುಪಿದೆ. ಈ ಹುದ್ದೆಗೆ 5,300ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 18 ಜನರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸೋಮವಾರ(ಆ. 10) ವರದಿಯಾಗಿದೆ.
ನಾಳೆ ಮಂಗಳವಾರ(ಆ. 11) ಮತ್ತು ಬುಧವಾರದಂದು ದೇವಾಲಯದ ಆವರಣದಲ್ಲಿ ಸಂದರ್ಶನ ನಿಗದಿಯಾಗಿದ್ದು, ಮಾಜಿ ನ್ಯಾಯಾಧೀಶರಾದ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಸುರೇಶ್ ಹವಾರೆ ಅವರನ್ನೊಳಗೊಂಡ ಸಮಿತಿಯು ಅಭ್ಯರ್ಥಿಗಳಿಗೆ ಸಂದರ್ಶನಗಳನ್ನು ನಡೆಸಲಿದೆ ಎಂದು ಟ್ರಸ್ಟ್ ಹೇಳಿದೆ.
ಸಂದರ್ಶನಗಳ ನಂತರ, ಆಯ್ಕೆ ಸಮಿತಿಯು ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರ ಹೆಸರುಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪರಿಗಣನೆಗೆ ಸಲ್ಲಿಸುತ್ತದೆ. ಸೆಪ್ಟೆಂಬರ್ 2ರಂದು ಟ್ರಸ್ಟ್ ಹೊಸ ಸಿಇಒ ನೇಮಕವನ್ನು ಘೋಷಿಸಲಿದೆ ಎನ್ನಲಾಗಿದೆ.

50 ರಿಂದ 70 ವರ್ಷದೊಳಗಿನ ವ್ಯಕ್ತಿಯನ್ನು ಸಿಇಒ ಆಗಿ ಆಯ್ಕೆ ಮಾಡಲಾಗುತ್ತಿದ್ದು, ಹಿಂದೂ ಮತ್ತು ಸಸ್ಯಾಹಾರಿಗಳನ್ನು ಸಿಇಒ ಆಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ರಾಮ ಮಂದಿರದ ಎಲ್ಲಾ ವ್ಯವಹಾರಗಳನ್ನು ಸಿಇಒ ನೋಡಿಕೊಳ್ಳಬೇಕಾಗುತ್ತದೆ. ಮತ್ತು ದೇಣಿಗೆ ಕಳ್ಳತನದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಟ್ರಸ್ಟ್ ಸಿಇಒ ಅವರನ್ನು ನೇಮಿಸಲು ನಿರ್ಧರಿಸಿದೆ.
ಮತ್ತೊಂದೆಡೆ, ದೇಣಿಗೆ ಹಗರಣದ ತನಿಖೆಗಾಗಿ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ವರದಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಮತ್ತ ಅವರಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಶುಕ್ಲಾ ಅವರಿಂದ ಗರಿಷ್ಠ 20.39 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಆರೋಪಿಗಳಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ವಿದೇಶಿ ಕರೆನ್ಸಿಯನ್ನು ವಾಪಸ್ ಪಡೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net