ಮತ್ತೊಬ್ಬ ಮಹಿಳೆ ಕಣ್ಣೀರು ಹಾಕುತ್ತಾ, ನಾವು ಟಿಎಂಸಿಗೇ ಮತ ಹಾಕಿದ್ದರೂ ಅವರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ನಮಗೆ ಮಹಿಳೆಯರ ಸುರಕ್ಷತೆ ಮುಖ್ಯ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ನೂರಾರು ಬೈಕ್‌ಗಳಲ್ಲಿ ಬಂದ ಟಿಎಂಸಿ ಕಾರ್ಯಕರ್ತರು ಹಳ್ಳಿಗಳಿಗೆ ನುಗ್ಗಿ ಜನರನ್ನು ಹೆದರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.