BPSC ಪರೀಕ್ಷಾ ಅಕ್ರಮಕ್ಕೆ ಬಿಹಾರದಲ್ಲಿ ಭುಗಿಲೆದ್ದ ಆಕ್ರೋಶ: ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಜಲ ಫಿರಂಗಿ ಪ್ರಯೋಗ! BPSC Student Protest

ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಹಾಗೂ ಜಲ ಫಿರಂಗಿ ಪ್ರಯೋಗ
ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಹಾಗೂ ಜಲ ಫಿರಂಗಿ ಪ್ರಯೋಗ
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರದಲ್ಲಿ BPSC ಪರೀಕ್ಷಾ ಅಕ್ರಮ ಖಂಡಿಸಿ ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ
  • ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಹಾಗೂ ಜಲ ಫಿರಂಗಿ ಪ್ರಯೋಗ
  • 70 ನೇ BPSC ಪರೀಕ್ಷೆ ರದ್ದತಿಗೆ ಒತ್ತಾಯಿಸಿ ವಿದ್ಯಾರ್ಥಿಗಳ ಹೋರಾಟ
ಪಾಟ್ನಾ: ನೀಟ್​ ಪರೀಕ್ಷೆ ನಡೆದಿದ್ದ ಅಕ್ರಮಕ್ಕಾಗಿ ದೆಹಲಿಯ ಜಂತರ್​-ಮಂತರ್​, ಜೆಪಿಎಸ್​ಸಿ ಪರೀಕ್ಷಾ ಅಕ್ರಮ ಖಂಡಿಸಿ ಜಾರ್ಖಂಡ್​ನಲ್ಲಿ ಪ್ರತಿಭಟನೆ ನಡೆದ ನಂತರ ಈಗ ಬಿಹಾರ್​ ಪಬ್ಲಿಕ್​ ಸರ್ವೀಸ್​ ಕಮಿಷನ್​ (BPSC) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಹಾರದ ವಿದ್ಯಾರ್ಥಿಗಳು ಪ್ರತಿಭಟನೆ (BPSC Student Protest) ಗೆ ಮುಂದಾಗಿದ್ದಾರೆ.
ಮಂಗಳವಾರ (ಆ.25) ಪಾಟ್ನಾದ ಗಾಂಧಿ ಮೈದಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ರಾಜಭನಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನಲೆ ಲಾಠಿ ಚಾರ್ಜ್​ ಹಾಗೂ ಜಲ ಫಿರಂಗಿಯನ್ನು ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.

ಪರೀಕ್ಷೆ ರದ್ದಾಗಬೇಕು!

2026 ರಂದು ನಡೆದ ಬಿಪಿಎಸ್​ಸಿ 70 ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಸೇರಿದಂತೆ ಪರೀಕ್ಷಾ ಅಕ್ರಮ ನಡೆದಿದೆ ಹೀಗಾಗಿ. ಈ ಪರೀಕ್ಷೆಯನ್ನು ರದ್ದುಪಡಿಸಿ, ಮರು ಪರೀಕ್ಷೆ ನಡೆಸಬೇಕು ಹಾಗೂ ರಾಜ್ಯದಲ್ಲಿ ಪರೀಕ್ಷಾ ಅಕ್ರಮವನ್ನು ನಿರ್ಬಂಧಿಸಿ ಕಠಿಣ ಕಾನೂನನ್ನು ಜಾರಿಗೆ ತರಬೇಕೆನ್ನುವುದು ಹೋರಾಟಗಾರರ ಆಗ್ರಹವಾಗಿದೆ.

ಲಾಠಿ ಚಾರ್ಜ್​, ಜಲ ಫಿರಂಗಿ ಪ್ರಯೋಗ!


ಇಂದು ಗಾಂಧಿ ಮೈದಾನದಲ್ಲಿ ಸೇರಿದ್ದ ಹೋರಾಟಗಾರರು, ರಾಜಭವನವನ್ನು ಪ್ರವೇಶಿಸಿ, ಮುಖ್ಯಮಂತ್ರಿ ಸಾಮ್ರಾಟ್​ ಸಿಂಗ್​ರನ್ನು ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದರು.

ಸುರಕ್ಷಾ ದೃಷ್ಟಿಯಿಂದ 200 ಪೊಲೀಸ್​ ಹಾಗೂ ಬ್ಯಾರಿಕೇಡ್​ಅನ್ನು ತಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾವಾಗ ವಿದ್ಯಾರ್ಥಿಗಳು ಬ್ಯಾರಿಕೇಡ್​ನ್ನು ತಳ್ಳಿ ರಾಜಭವನದತ್ತ ನುಗ್ಗಲು ಪ್ರಯತ್ನಿಸಿದಾಗ, ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಾ, ಪರಿಸ್ಥಿತಿ ಕೈ ಮೀರಲಿದೆ ಎಂದು ತಿಳಿದಾಗ ಜಲ ಫಿರಂಗಿಯನ್ನು ಪ್ರಯೋಗ ಮಾಡಿರುವುದಾಗಿ ಬಿಹಾರ್​ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.


ಸದ್ಯ ಪರಿಸ್ಥಿತಿ ತಮ್ಮ ಹಿಡಿತದಲ್ಲಿದೆ. ಪ್ರತಿಭಟನಾಕಾರರಿಗೆ ರಾಜಭವನದ ಸುತ್ತ ಹೋರಾಟಕ್ಕೆ ಯಾವುದೇ ಅನುಮತಿ ನೀಡಿಲ್ಲ. ಹೀಗಾಗಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮತ್ತೆ ಲಾಠಿ ಏಟು ತಿನ್ನಲು ಸಿದ್ಧರಿದ್ದೇವೆ!


ಪೊಲೀಸರ ಲಾಠಿ ಚಾರ್ಜ್​ ಬಳಿಕ ಮಾತನಾಡಿರುವ ಪ್ರತಿಭಟನಾಕಾರರು, ಬಿಪಿಎಸ್​ಸಿ ಸಂಪೂರ್ಣ ಭ್ರಷ್ಟವಾಗಿದೆ. ಆ ಸಂಸ್ಥೆಗೆ ಬದಲಾವಣೆ ಅಗತ್ಯವಾಗಿದೆ. 70 ನೇ ಬಿಪಿಎಸ್​ಸಿ ಪರೀಕ್ಷೆಯನ್ನು ರದ್ದುಪಡಿಸಲೇ ಬೇಕು. ಇಲ್ಲದಿದ್ದರೆ ನಾವು ಮತ್ತೊಮ್ಮೆ ರಾಜಭವನ ಮುತ್ತಿಗೆ ಹಾಕುತ್ತೇವೆ, ಇನ್ನೊಮ್ಮೆ ಲಾಠಿ ಏಟನ್ನು ತಿನ್ನಲು ನಾವು ಹೆದರುವವರಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net