ಉಪನಾಯಕ ಸ್ಥಾನದಿಂದ ಔಟ್​: ಎಎಪಿಗೆ ಪಕ್ಷದ ಸಂಸದನಿಂದಲೇ ಡಿಚ್ಚಿ; ಪಿಚ್ಚರ್ ಅಭಿ ಬಾಕಿ ಹೈ ಎಂದ ರಾಘವ್​ಚಡ್ಡಾ! Raghav Chadha

ಪಿಚ್ಚರ್​ ಅಭಿ ಬಾಕಿ ಹೈ ಎಂದು ಗುಟುರು ಹಾಕಿದ ಆಪ್​ ಸಂಸದ
ಪಿಚ್ಚರ್​ ಅಭಿ ಬಾಕಿ ಹೈ ಎಂದು ಗುಟುರು ಹಾಕಿದ ಆಪ್​ ಸಂಸದ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾ ಔಟ್​
  • ಸಂಸತ್ತಿನಲ್ಲಿ ಕ್ಷುಲ್ಲಕ ಪ್ರಶ್ನೆ ಕೇಳುತ್ತಾರೆಂಬ ಕಾರಣಕ್ಕೆ ಕೊಕ್​
  • ಪಂಜಾಬ್​ ಗೆ ಇವನ ಕೊಡುಗೆ ಏನು? ಕೇಳಿದ್ದ ಪಕ್ಷದ ಮುಖಂಡರು
  • ಪಂಜಾಬ್​ಗೆ ತಾನು ಏನು ಮಾಡಿದ್ದೆನೆಂದು ವಿಡಿಯೋ ಹಂಚಿಕೊಂಡ ಚಡ್ಡಾ
  • ಪಿಚ್ಚರ್​ ಅಭಿ ಬಾಕಿ ಹೈ ಎಂದು ಗುಟುರು ಹಾಕಿದ ಆಪ್​ ಸಂಸದ
ಪಂಜಾಬ್: ಆಮ್​ ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ(Raghav Chadha) ರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ದಿನದಿಂದ ಎಎಪಿ ಮತ್ತು ಚಡ್ಡಾ ನಡುವೆ ಮುಸುಕಿನ ಗುದ್ದಾಟ ಹೆಚ್ಚಾಗುತ್ತಿದೆ. ರಾಘವ್​ ಚಡ್ಡಾ ತೀರಾ ಕ್ಷುಲಕ ವಿಷಯದ ಬಗ್ಗೆ ಚರ್ಚೆ ಮಾಡುತ್ತಾರೆ ಮತ್ತು ಪ್ರಶ್ನೆ ಎತ್ತುತ್ತಾರೆ ಎಂಬ ಕಾರಣವನ್ನು ನೀಡಿ ಆಮ್​ ಆದ್ಮಿ ಪಕ್ಷ ರಾಘವ್​ ಅವರಿಗೆ ನೀಡಿದ್ದ ಸ್ಥಾನವನ್ನು ಹಿಂತೆಗೆದುಕೊಂಡಿತು.

ಪಿಚ್ಚರ್​ ಅಭಿ ಬಾಕಿ ಹೈ ಎಂದ ಚಡ್ಡಾ!

ಪಂಜಾಬ್​ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಘವ್​ ಚಡ್ಡಾ, ಪಂಜಾಬ್​ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರದೆ ಪಕ್ಷದ ಕೆಲ ನಾಯಕರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರವೆಂಬಂತೆ ಚಡ್ಡಾ, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ರಾಘವ್​ ಚಡ್ಡಾ ಸಂಸತ್ತಿನಲ್ಲಿ ಪಂಜಾಬ್​ ಬಗ್ಗೆ ಪ್ರಶ್ನೆ ಎತ್ತುವಲ್ಲಿ ಸೋತಿದ್ದಾರೆ ಎನ್ನುವವರಿಗೆ ಈ ವಿಡಿಯೋ ಅರ್ಪಣೆ. ಇದು ಕೇವಲ ಟ್ರೇರಲ್​ ಮಾತ್ರ ಪಿಚ್ಚರ್​ ಅಭಿ ಬಾಕಿ ಹೈ ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೋನಲ್ಲಿ ಏನಿದೆ?

ರಾಜ್ಯಸಭಾ ಸಂಸದ ರಾಘವ್​ ಚಡ್ಡಾ ಹಂಚಿಕೊಂಡಿರುವ ಚಿಕ್ಕ ವಿಡಿಯೋನಲ್ಲಿ ಅವರು ಪಂಜಾಬ್​ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸರ್​ ಅಧಿವೇಶನದಲ್ಲಿ ಮಾತನಾಡಿದ ಕ್ಲಿಪ್​ಗಳನ್ನು ಸೇರಿಸಿ ತಯಾರಿಸಿದ ವಿಡಿಯೋ ಇದಾಗಿದೆ.
ಇದರಲ್ಲಿ ಚಡ್ಡಾ, ಪಂಜಾಬ್​ ನ ರೈತರಿಗೆ ಎಂಸ್​ಪಿ ನೀಡುವುದು, ಪಂಜಾಬ್​ಗೆ ನೂತನ ರೈಲುಗಳನ್ನು ಪೂರೈಸುವುದು, ಪಾಕಿಸ್ತಾನದಲ್ಲಿರುವ ಗುರುದ್ವಾರಾಗಳಿಗೆ ಸಿಖ್ಖರು ತೆರೆಳಲು ಸೂಕ್ತ ವ್ಯವಸ್ಥೆ ಮಾಡುವುದು, ಸ್ವಾತಂತ್ರ ಹೋರಾಟಗಾರ ಭಗತ್​ ಸಿಂಗ್​ ಅವರಿಗೆ ಭಾರತ ರತ್ನ ನೀಡುವುದು ಮೊದಲಾದ ವಿಷಯಗಳ ಕುರಿತು ತಾವು ಮಾತನಾಡಿರುವ ವಿಡಿಯೋಗಳ ತುಣುಕನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮೋದಿ ವಿರುದ್ಧದ ಪೋಸ್ಟ್​ ಡಿಲೀಟ್​ ಮಾಡಿರುವ ಆಪ್​ ಸಂಸದ

ರಾಜ್ಯಸಭಾ ಉಪನಾಯಕ ಸ್ಥಾನದಿಂದ ಕೆಳಗಿಳಿದ ಕೆಲವೇ ದಿನದಲ್ಲಿ ರಾಘವ್​ ಚಡ್ಡಾ ಪ್ರಧಾನಿ ಮೋದಿ ವಿರುದ್ಧ ಮಾಡಿದ್ದ ಟೀಕೆಗಳನ್ನು ತಮ್ಮ ಟ್ವಿಟರ್​ ನಿಂದ ತೆಗೆದು ಹಾಕಿದ್ದಾರೆ ಎಂದು ಎಎಪಿ ಪಕ್ಷದ ಮಾಜಿ ಸಚಿವ ಸೌರಭ್​ ಭಾರದ್ವಾಜ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಘವ್​ ಚಡ್ಡಾ ಪಕ್ಷದ ಸಿದ್ಧಾಂತವನ್ನು ಮರೆತಿದ್ದಾರೆ, ಪ್ರಧಾನಿ ಮೋದಿ ಅವರಿಗೆ ಮಾಡಿದ್ದ ಕಠಿಣ ಪ್ರಶ್ನೆಗಳನ್ನು ತೆಗೆದು ಹಾಕಿರುವ ಚಡ್ಡಾ, ಕೇವಲ ಮೋದಿಯನ್ನು ಹೊಗಳುವ ಎರಡು ಟ್ವಿಟ್​ಗಳನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net