ನಮ್ಮದು ಪ್ಯೂರ್ ರಾಜಕೀಯ ಸಂಘಟನೆ: ಧರ್ಮಕ್ಕಿಂತ ಆಡಳಿತ ಮತ್ತು ಸಾರ್ವಜನಿಕ ಜವಾಬ್ದಾರಿ ಮುಖ್ಯ: ಕೆ. ಅಣ್ಣಾಮಲೈ | K Annamalai

ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ
Published on
ಚೆನ್ನೈ: ತಮಿಳುನಾಡಿನಲ್ಲಿ ಹೊಸ ವಿ ದ ಲೀಡರ್ ಎಂಬ ಸಂಘಟನೆ ಹುಟ್ಟುಹಾಕಿರುವ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಘಟನೆ ಮುಖ್ಯಸ್ಥ ಕೆ.ಅಣ್ಣಾಮಲೈ(K Annamalai), ತಮ್ಮ ಸಂಘಟನೆಯ ಮಾರ್ಗಸೂಚಿಯನ್ನು ತಿಳಿಸಿದ್ದು, ಧರ್ಮ ನಮ್ಮ ಸಂಘಟನೆಯ ವ್ಯಾಪ್ತಿಯಿಂದ ಹೊರಗಿದ್ದು, ನಮ್ಮದು ಪ್ಯೂರ್ ರಾಜಕೀಯ ಸಂಘಟನೆ ಎಂದು ಹೇಳಿದ್ದಾರೆ.
ಪೊಲ್ಲಾಚಿಯಲ್ಲಿ ಇಂದು(ಜು. 12) ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಮಾದಕವಸ್ತು ಮುಕ್ತ ಪೊಲ್ಲಾಚಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿರುವ ಅವರು, ಈ ಆಂದೋಲನವು ಅಂತಿಮವಾಗಿ ರಾಜಕೀಯ ಪಕ್ಷವಾಗಲಿದೆ. ಧರ್ಮ ನಮ್ಮ ಸಂಘಟನೆಯ ವ್ಯಾಪ್ತಿಯಿಂದ ಹೊರಗಿದೆ. ಧರ್ಮಕ್ಕಿಂತ ಹೆಚ್ಚಾಗಿ ಆಡಳಿತ ಮತ್ತು ಸಾರ್ವಜನಿಕ ಜವಾಬ್ದಾರಿಯ ಮೇಲೆ ನಮ್ಮ ಸಂಘಟನೆ ಕೇಂದ್ರೀಕರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಈ ಆಂದೋಲನವನ್ನು ಸದಸ್ಯತ್ವ ಅಭಿಯಾನದ ಮೂಲಕ ನಿರ್ಮಿಸಲಾಗುತ್ತಿಲ್ಲ, ಬದಲಾಗಿ ಜನರಿಗೆ ಸಾಮೂಹಿಕ ವೇದಿಕೆಯಾಗಿ ನಿರ್ಮಿಸಲಾಗುತ್ತಿದೆ. ಇನ್ನೂ ನಮ್ಮ ರಾಜಕೀಯವು ತಮಿಳುನಾಡನ್ನು ಪ್ರಮುಖ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಸಂಘಟನೆ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಲು ಸಜ್ಜಾಗುತ್ತಿದೆ. ಸೂಕ್ತ ಸಮಯದಲ್ಲಿ ಅದರ ಪರಿವರ್ತನೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ನಾನು ಯಾರನ್ನೂ 'ವಿ ದ ಲೀಡರ್ಸ್​' ಆಂದೋಲನಕ್ಕೆ ಸೇರಲು ಆಹ್ವಾನಿಸಿಲ್ಲ. ಮುಂದಿನ ಆರು ತಿಂಗಳಲ್ಲಿ ನಾವು 50 ಲಕ್ಷ ಮರಗಳನ್ನು ನೆಡಲು ಯೋಜಿಸಬೇಕು. ಮಹಿಳೆಯರು ಮತ್ತು ಯುವಜನರು ಈ ಚಳವಳಿಯಲ್ಲಿ ಗಮನಾರ್ಹ ಪಾಲನ್ನು ಹೊಂದಿದ್ದಾರೆ. ಜೆನ್ ಝಿ ಸಮುದಾಯ ತಮಿಳುನಾಡಿನ ರಾಜಕೀಯ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ನಮ್ಮ ಚಳವಳಿಯಲ್ಲಿ ಈಗಾಗಲೇ ಶೇ. 17 ರಷ್ಟು ಮಹಿಳೆಯರಿದ್ದಾರೆ. ಅವರಲ್ಲಿ ಶೇ. 14 ರಷ್ಟು 18-25 ವರ್ಷ ವಯಸ್ಸಿನವರು. ಶೇ. 54 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 2031ರ ಚುನಾವಣೆಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಜೆನ್ ಝಿ 2026ರ ಚುನಾವಣೆಯಲ್ಲೊ ಬದಲಾವಣೆ ತಂದ ರೀತಿಯಲ್ಲಿ 2031ರಲ್ಲಿಯೂ ಅವರು ಮತ್ತೊಂದು ಬದಲಾವಣೆ ತರಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net