ಬೆಳಗ್ಗೆ 6 ಗಂಟೆಗೆ ಬಂತು ಮೆಸೇಜ್​! ಒರಾಕಲ್ ಉದ್ಯೋಗಿಗಳಿಗೂ ತಟ್ಟಿದ ವಜಾ ಪ್ರಕ್ರಿಯೆ; ಹೇಳದೆ, ಕೇಳದೆ ಗೇಟ್​ಪಾಸ್​

ಒರಾಕಲ್ ಸಂಸ್ಥೆ
ಒರಾಕಲ್ ಸಂಸ್ಥೆ
Published on

ಪ್ರಮುಖ ಮುಖ್ಯಾಂಶಗಳು

  • ಮೈಕ್ರೋಸಾಫ್ಟ್​, ಟಿಸಿಎಸ್​ ಬಳಿಕ ಒರಾಕಲ್​ ಸಂಸ್ಥೆ
  • ಬೆಳಗ್ಗೆ 6 ಗಂಟೆಗೆ ಇ-ಮೇಲ್​ ಮೂಲಕ ಕಿತ್ತುಬಿಸಾಡಿರುವ ಸಂದೇಶ
  • ಭಾರತದ ಉದ್ಯೋಗಿಗಳನ್ನು ದಿಢೀರ್​ ಹೊರನೂಕಿದ ಕಂಪನಿ, ಹಲವರ ಆಕ್ರೋಶ
ನವದೆಹಲಿ: ಕಳೆದ ವರ್ಷವಷ್ಟೇ ಟಿಸಿಎಸ್​, ಮೈಕ್ರೋಸಾಫ್ಟ್​, ಅಮೆಜಾನ್​ನಂತಹ ದೈತ್ಯ ಟೆಕ್​ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯಕ್ಕೆ ಮುಂದಾಯಿತು. ಏಕಕಾಲಕ್ಕೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಟೆಕ್ಕಿಗಳ ಕೆಲಸಗಳನ್ನು ಕಿತ್ತುಕೊಂಡಿರುವ ಸಂಸ್ಥೆಗಳು, ಬೃಹತ್ ಆಕಾರದಲ್ಲಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯ ಹಿಂದೆ ಓಡುತ್ತಿವೆ.
ಈಗ ಒರಾಕಲ್​ ಸಂಸ್ಥೆಯು ತನ್ನ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಇಂದು (ಮಾ.30) ಬೆಳಗ್ಗೆ 6 ಗಂಟೆಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಟೆಕ್ಕಿಗಳಿಗೆ ಲೇಆಫ್​ ಸಂದೇಶಗಳನ್ನು ಕಳಿಸುವ ಮೂಲಕ ಬಿಗ್ ಶಾಕ್ ನೀಡಿದೆ. ಹಲವಾರು ಮಂದಿಗೆ ಇ-ಮೇಲ್​ ಬಂದಿದ್ದು, ಕೆಲವರಿ ಮಾತ್ರ ಕಂಪನಿಯ ಲಾಗಿನ್​, ಸಿಸ್ಟಮ್​ ಲಾಕ್​ ಆಗಿದೆ. ಕೆಲಸದಿಂದ ಕಿತ್ತುಬಿಸಾಡಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಉದ್ಯೋಗಿಗಳು, ಯಾವುದೇ ಮಾತುಕತೆ ಅಥವಾ ಮುಂಚಿತವಾಗಿ ಅಲರ್ಟ್​ ಮಾಡದೆಯೇ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಸ್ಥೆಯ ವ್ಯವಸ್ಥಾಪಕರಾಗಲಿ ಅಥವಾ ಎಚ್​ಆರ್​ ಆಗಲಿ, ನಮ್ಮ ಜೊತೆ ನೇರವಾಗಿ ಲೇಆಫ್​ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ವಜಾಗೊಳಿಸುವಿಕೆಯ ಕುರಿತಾಗಿ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದೆ ಹೋದರೂ ಭಾರತದ ಅನೇಕ ಉದ್ಯೋಗಿಗಳು ತಮ್ಮ ಪರಿಸ್ಥಿತಿಯನ್ನು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಳ್ಳುವ ಮೂಲಕ ಹಲವರ ಗಮನಕ್ಕೆ ತಂದಿದ್ದಾರೆ.

ಎಐ ಮೇಲೆ ಹೂಡಿಕೆ

ಆಧುನಿಕ ಹಾಗೂ ಭವಿಷ್ಯದ ಸ್ಮಾರ್ಟ್​ ಟೆಕ್ನಾಲಜಿ ಎಐ ಮೇಲೆ ಹೆಚ್ಚಿನ ಬಂಡವಾಳ ಹೂಡಲು ದಾಪುಗಾಲು ಇಟ್ಟಿರುವ ಸಂಸ್ಥೆ, ತಮ್ಮ ಹೂಡಿಕೆಗೆ ಹಣ ವಿನಿಯೋಗಿಸಲು ಬೃಹತ್​ ಸಂಖ್ಯೆಯ ಉದ್ಯೋಗಿಗಳ ವಜಾಗೊಳಿಸುವಿಕೆಗೆ ಮುಂದಾಗಿರುವುದು ಸ್ಪಷ್ಟವಾಗಿದೆ. ಟಿಡಿ ಕೋವೆನ್ ಅಂದಾಜಿನ ಪ್ರಕಾರ, ಈ ಕಡಿತವು 20,000ದಿಂದ 30,000 ಉದ್ಯೋಗಿಗಳನ್ನು ತೆಗೆದುಹಾಕುವ ಗುರಿ ಹೊಂದಿದೆ ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net