ಅಮೆರಿಕದ ಟೆಕ್ನಾಲಜಿಯ ಈ ದೈತ್ಯ ಕಂಪನಿಯು 2026ರ ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಸುಮಾರು 21,000 ಉದ್ಯೋಗಗಳನ್ನು ಕಡಿತಗೊಳಿಸಿರುವುದು ನಿಜ ಎಂದು ತಿಳಿಸಿದೆ. ಇದಕ್ಕೆ ಎಐ ಮೂಲ ಕಾರಣ ಎಂಬುದನ್ನೂ ಸ್ಪಷ್ಟಪಡಿಸಿದೆ. ಕಂಪನಿಯ ಕಾರ್ಯಪಡೆಯು ಶೇ.13ರಷ್ಟು ಕುಸಿದಿದ್ದು, ಕಳೆದ ವರ್ಷ ಸುಮಾರು 1,62,000 ಉದ್ಯೋಗಿಗಳಿಂದ ಈ ವರ್ಷದ ಮೇ 31ರ ಹೊತ್ತಿಗೆ 1,41,000ಕ್ಕೆ ಕಟ್ ಆಫ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ.