ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಕೋಣೆಯೊಂದರ ಒಳಗಿನ ದೃಷ್ಯವನ್ನು ಕಾಣಬಹುದು. ನೆಲಕ್ಕೆ ಅಲಂಕೃತ ನೆಲಹಾಸನ್ನು ಹಾಕಲಾಗಿದೆ. ಅಲ್ಲಿಯೇ ಒಂದು ಟೇಬಲ್ ಕೂಡ ಇಡಲಾಗಿದೆ. ಆ ನೆಲದ ಹಾಸಿನ ಮೇಲೆ ಒಂದು ಸ್ಮಾರ್ಟ್ಫೋನ್ ಕೂಡ ಇದೆ. ಅದು ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚೋದು ಅಷ್ಟು ಸುಲಭವಲ್ಲ. ಏಕೆಂದರೆ, ಸ್ಮಾರ್ಟ್ಫೋನ್ ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿ ಕೇವಲ ಕಣ್ಣಿಗೆ ಮಾತ್ರವಲ್ಲದೆ, ತಲೆಗೆ ಕೊಂಚ ಕೆಲಸ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದರೆ ಸ್ಮಾರ್ಟ್ಫೋನ್ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಸ್ಮಾರ್ಟ್ಫೋನ್ ಅನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.