ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಒಂದು ಕೋಣೆಯ ಒಳಗಿನ ಚಿತ್ರಣವನ್ನು ಕಾಣಬಹುದು. ಕೋಣೆಯ ಒಳಗೆ ಒಂದು ದೊಡ್ಡ ಬೆಡ್ ಇದೆ. ಅದರ ಮೇಲೆ ಎರಡು ದಿಂಬುಗಳಿದ್ದು, ಒಂದು ಬೆಡ್ಶೀಟ್ ಅಸ್ತವ್ಯಸ್ತವಾಗಿ ಬಿದ್ದಿದೆ. ಆ ಬೆಡ್ ಮೇಲೆ ಒಂದು ನಾಯಿ ಅಡಗಿದೆ. ಅದು ಎಲ್ಲಿದೆ ಎಂಬುದನ್ನು ನೀವು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೀಗಾಗಿ ನೀವು ಕಣ್ಣಿಗೆ ಮಾತ್ರವಲ್ಲದೆ, ತಲೆಗೆ ಕೊಂಚ ಕೆಲಸ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದರೆ ನಾಯಿ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಶ್ವಾನ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.