ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಗಿಡಗಳು ಬೆಳೆದು ನಿಂತಿರುವ ದೃಶ್ಯವನ್ನು ಕಾಣಬಹುದು. ಮುಂಭಾಗದಲ್ಲಿ ಬಿರುಕುಬಿಟ್ಟ ಕಾಂಕ್ರೀಟ್ ಅಂಚೊಂದು ಕಾಣಿಸುತ್ತದೆ. ಅದರ ಮುಂದೆ ಒಂದು ಸಣ್ಣ ತೊರೆ ಅಥವಾ ಒಳಚರಂಡಿ ಕಾಲುವೆ ಗಿಡಗಳ ಮಧ್ಯೆ ಹಾದು ಹೋಗುತ್ತದೆ. ನೆಲದ ಮೇಲೆ ಒಣಗಿದ ಎಲೆಗಳು ಬಿದ್ದಿವೆ. ಒಟ್ಟಾರೆ ವಾತಾವರಣವು ಶಾಂತ ಮತ್ತು ಹಳ್ಳಿಗಾಡಿನ ಪ್ರದೇಶದಂತಿದೆ. ಆ ಫೋಟೋದಲ್ಲಿ ಒಂದು ಭಾಗದಲ್ಲಿ ಒಂದು ಜಿಂಕೆ ಕುಳಿತಿದೆ. ಅದು ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚೋದು ಅಷ್ಟು ಸುಲಭವಲ್ಲ. ಏಕೆಂದರೆ, ಜಿಂಕೆ ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿ ಕೇವಲ ಕಣ್ಣಿಗೆ ಮಾತ್ರವಲ್ಲದೆ, ತಲೆಗೆ ಕೊಂಚ ಕೆಲಸ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದರೆ ಜಿಂಕೆ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಜಿಂಕೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.