ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ರಸ್ತೆಯ ಒಂದು ಭಾಗ ಕಾಣುತ್ತದೆ. ಅದರ ಮುಂಭಾಗದಲ್ಲಿ ಹುಲ್ಲು ಮತ್ತು ಮರಗಳಿಂದ ಆವೃತವಾದ ಒಂದು ಅರಣ್ಯ ಪ್ರದೇಶವನ್ನು ಕಾಣಬಹುದು. ಅದರ ನಡುವೆ ಒಂದು ಕಾಡೆಮ್ಮೆ ಹುಲ್ಲು ಮೇಯುತ್ತಾ ನಿಂತಿದೆ. ಅದು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚೋದು ಅಷ್ಟು ಸುಲಭವಲ್ಲ. ಏಕೆಂದರೆ, ಕಾಡೆಮ್ಮೆ ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿ ಕೇವಲ ಕಣ್ಣಿಗೆ ಮಾತ್ರವಲ್ಲದೆ, ತಲೆಗೆ ಕೊಂಚ ಕೆಲಸ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದರೆ ಕಾಡೆಮ್ಮೆ ಎಲ್ಲಿಗೆ ಎಂಬುದು ಗೊತ್ತಾಗುತ್ತದೆ. ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಕಾಡೆಮ್ಮೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.