ಅಯ್ಯಪ್ಪನ ವೃತಕ್ಕೆ ವಿರೋಧ; ರಂಜಾನ್​ಗೆ ರಿಯಾಯಿತಿ: ತೆಲಂಗಾಣ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ | Ramzan

ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ, ಬಿಜೆಪಿ ವಕ್ತಾರ ಎನ್.ವಿ. ಸುಭಾಷ್
ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ, ಬಿಜೆಪಿ ವಕ್ತಾರ ಎನ್.ವಿ. ಸುಭಾಷ್
Published on

ಪ್ರಮುಖ ಮುಖ್ಯಾಂಶಗಳು

  • ರಂಜಾನ್​ ಹಬ್ಬಕ್ಕೆ ತೆಲಂಗಾಣ ನೌಕಕರಿಗೆ ವಿಶೇಷ ರಿಯಾಯಿತಿ
  • ಈ ಸವಲತ್ತು ಕೇವಲ ಮುಸ್ಲಿಮರಿಗೆ ಏಕೆ ಎಂದು ಬಿಜೆಪಿ ಪ್ರಶ್ನೆ
  • ಕಾಂಗ್ರೆಸ್​ ಯಾವಾಗಲೂ ಹಿಂದೂಗಳ ಆಚರಣೆಗೆ ವಿರೋಧಿಸುತ್ತೆ, ಆದರೆ ಮುಸ್ಲಿಮರ ಹಬ್ಬವನ್ನು ಪ್ರೋತ್ಸಾಹಿಸುತ್ತದೆ ಎಂದು ಆರೋಪ
ತೆಲಂಗಾಣ: ರಂಜಾನ್ (Ramzan) ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕಚೇರಿಯಿಂದ ಬೇಗನೆ ಹೊರಹೋಗಲು ಅವಕಾಶ ನೀಡುವ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಆದೇಶವನ್ನು ಟೀಕಿಸಿರುವ ಬಿಜೆಪಿ, ಹಿಂದೂ ಸಮುದಾಯದ ಹಬ್ಬಕ್ಕೂ ಇದೇ ರೀತೀಯ ನಿಯಮಗಳನ್ನು ನೀಡಬೇಕು ಎಂದು ಆಗ್ರಹಿಸಿದೆ.
ಈ ರೀತಿ ನಿರ್ದಿಷ್ಠ ಸಮುದಾಯಳಿಗೆ ವಿಶೇಷ ರಿಯಾಯಿತಿ ನೀಡುವುದು ರಾಜ್ಯ ಮತ್ತು ದೇಶದಲ್ಲಿ ಧರ್ಮ ಆಧರಿತ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತೆಲಂಗಾಣ ಬಿಜೆಪಿ ಮುಖ್ಯ ವಕ್ತಾರ ಎನ್.ವಿ. ಸುಭಾಷ್ ಹೇಳಿದ್ದಾರೆ.
41 ದಿನಗಳ ಅಯ್ಯಪ್ಪ ಸ್ವಾಮಿ ದೀಕ್ಷೆ ಆಚರಿಸುವ ಹಿಂದೂ ನೌಕರರು ಸಾಂಪ್ರದಾಯಿಕ ಕಪ್ಪು ಉಡುಪಿನಲ್ಲಿ ಕೆಲಸಕ್ಕೆ ಹಾಜರಾಗುವುದನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸಿತ್ತು ಆದರೆ ರಂಜಾನ್​ ಆಚರಿಸುವ ಮುಸ್ಲಿಂ ಸಮುದಾಯಕ್ಕೆ ಈ ವಿಶೇಷ ಸವಲತ್ತನ್ನು ನೀಡಲು ಮುಂದಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್​ ಸರ್ಕಾರಕ್ಕೆ ಹಿಂದೂ ಹಬ್ಬಗಳ ಮೇಲೆ, ವಿಶೇಷವಾಗಿ ಗಣೇಶ ಚತುರ್ಥಿ ಮತ್ತು ದೀಪಾವಳಿಯ ಸಮಯದಲ್ಲಿ ಪಟಾಕಿಗಳ ಮೇಲೆ ನಿರ್ಭಂಧ ಹೇರುತ್ತಾರೆ. ಆದರೆ ಇತರೇ ಧರ್ಮಿಯರ ಹಬ್ಬಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಸುಗಮಗೊಳಿಸುವುದನ್ನು ನಾವು ವಿರೋಧಿಸುತ್ತಿಲ್ಲ, ಆದರೆ ಈ ಸವಲತ್ತುಗಳು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ದೊರೆಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ರಂಜಾನ್​ ಆಚರಣೆಗೆ ವಿಶೇಷ ಸವಲತ್ತುಗಳನ್ನು ನೀಡಿದರೆ, ನಂತರ ಹಿಂದೂಗಳ ಹಬ್ಬಗಳಿಗೂ ಇದೇ ರೀತಿಯಲ್ಲಿ ಸವಲತ್ತುಗಳನ್ನು ನೀಡಬೇಕಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸರ್ಕಾರ ನೆನಪಿಟ್ಟುಕೊಳ್ಳಲಿ ಎಂದು ಎನ್.ವಿ. ಸುಭಾಷ್ ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net