ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಒಳಗಿನ ಆಂತರಿಕ ಮಹಾಯುದ್ಧ ಈಗ ಸುನಾಮಿಯಂತೆ ದೆಹಲಿ ತಲುಪಿದೆ. ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ನಾಯಕತ್ವದ ವಿರುದ್ಧ ದಂಗೆ ಎದ್ದಿರುವ ಟಿಎಂಸಿ ಸಂಸದರು ಈಗ ಹೊಸ ಬಣ ರಚಿಸಲು ತೆರೆಮರೆಯಲ್ಲಿ ಭಾರಿ ಸ್ಕೆಚ್ ಹಾಕಿದ್ದಾರೆ. ಈ ನಡುವೆ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಶಂತನು ಠಾಕೂರ್(Shantanu Thakur) ಭಾರಿ ಸ್ಫೋಟಕ ಹೇಳಿಕೆ ನೀಡಿದ್ದು, ಟಿಎಂಸಿಯ ಬಂಡಾಯ ಶಾಸಕರು ಮತ್ತು ಸಂಸದರು ಬಿಜೆಪಿಗೆ ಬರಲು ಕಾತುರರಾಗಿದ್ದಾರೆ, ಆದರೆ ಸದ್ಯಕ್ಕೆ ನಮ್ಮ ಪಕ್ಷದ ಬಾಗಿಲುಗಳು ಅವರಿಗಾಗಿ ಮುಚ್ಚಲ್ಪಟ್ಟಿವೆ ಎಂದು ಹೇಳುವ ಮೂಲಕ ಬಂಗಾಳ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.