ವಂದೇ ಮಾತರಂ ಹಾಡಿದರೆ ಮಾತ್ರ ದೇಶಭಕ್ತರಲ್ಲ! ಬಿಜೆಪಿ ಭಾರತವನ್ನು ತೀವ್ರಗಾಮಿ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದೆ: ಅಸಾದುದ್ದೀನ್ ಓವೈಸಿ | Vande Mataram

ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ
Published on

ಪ್ರಮುಖ ಮುಖ್ಯಾಂಶಗಳು

  • ವಂದೇ ಮಾತರಂ ಹಾಡುವವರು ಮಾತ್ರ ದೇಶಭಕ್ತರಲ್ಲ: ಅಸಾದುದ್ದೀನ್ ಓವೈಸಿ
  • ಸಂವಿಧಾನದ 25 ನೇ ವಿಧಿ ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕನಾಗಿ ಒಪ್ಪಿದೆ
  • ಬಿಜೆಪಿ ಭಾರತವನ್ನು ತೀವ್ರಗಾಮಿ ದೇಶವನ್ನಾಗಿಸಲು ಹೊರಟಿದೆ
  • ಟಿಪ್ಪು ಸುಲ್ತಾನ್​ ಸಾರ್ವಕರ್​ ರೀತಿ ಪ್ರಟಿಷರಲ್ಲಿ ಕ್ಷಮೆಯನ್ನು ಕೇಳಿಲ್ಲ
ಹೈದರಾಬಾದ್‌: ವಂದೇ ಮಾತರಂ (Vande Mataram) ಹಾಡುವುದು ಮತ್ತು ಅದಕ್ಕೆ ಗೌರವ ತೋರಿಸಿದರೇ ಮಾತ್ರ ದೇಶಕ್ಕೆ ವಿಷ್ಠರಾಗಿದ್ದಾರೆ ಎಂದು ಪರಗಣಿಸಬಾರದು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಭಾರತವನ್ನು ತೀವ್ರಗಾಮಿ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತಿವೆ, ಇದನ್ನು ನಾವು ತಡೆಯಬೇಕು ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಓವೈಸಿ, ಭಾರತೀಯ ಸಂವಿಧಾನವು ಭಾರತದ ಪ್ರಜೆಗಳಾದ ನಾವು ಎಂದು ಪ್ರಾರಂಭವಾಗುತ್ತದೆ ಹೊರತು ಭಾರತ್ ಮಾತಾ ಕಿ ಜೈ ನಂತಹ ಘೋಷಣೆಗಳೊಂದಿಗೆ ಅಲ್ಲ ಎಂದು ಹೇಳಿದ್ದಾರೆ. ಸಂವಿಧಾನದ ಆರ್ಟಿಕಲ್ 25 ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಗುರುತಿಸಿದೆ ಹೀಗಾಗಿ ಯಾವ ಧರ್ಮೀಯರ ಮೇಲೆಯೂ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಗೀತೆಗೆ ಅವಮಾನ ಮಾಡಲಾಗುತ್ತಿದೆ

ವಂದೇ ಮಾತರಂಗೆ ರಾಷ್ಟ್ರಗೀತೆ ಜನ ಗಣ ಮನದಂತೆಯೇ ಗೌರವ ನೀಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ರಾಷ್ಟ್ರೀಯ ಗೀತೆಯ ಎಲ್ಲಾ ಆರು ಚರಣಗಳನ್ನು 3 ನಿಮಿಷ 10 ಸೆಕೆಂಡುಗಳ ಅವಧಿಯೊಂದಿಗೆ ಹಾಡಲಾಗುತ್ತದೆ. ಆದರೆ ಹೊಸ ಆದೇಶದ ಪ್ರಕಾರ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಹೇಳಲಾಗಿದೆ. ಇದು ರಾಷ್ಟ್ರಗೀತೆ ಮಾಡಿದ ಅಪಮಾನವಾಗಿದೆ ಎನ್ನುವುದು ಓವೈಸಿ ಅವರ ವಾದವಾಗಿದೆ.

ಸಾವರ್ಕರ್​ನಂತೆ ಟಿಪ್ಪು ಬ್ರಿಟಿಷರಿಗೆ ಕ್ಷಮೆ ಕೇಳಿಲ್ಲ: ಓವೈಸಿ

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡುವಾಗ ಹುತಾತ್ಮರಾದರು ಎಂದು ಓವೈಸಿ ಹೇಳಿದರು. ವೀರ್ ಸಾವರ್ಕರ್ ಮಾಡಿದಂತೆ ಟಿಪ್ಪು ಬ್ರಿಟಿಷರಿಗೆ ಕ್ಷಮೆಯನ್ನು ಕೋರಿ ಪತ್ರಗಳನ್ನು ಬರೆದಿಲ್ಲ ಎಂದರು.
ಟಿಪ್ಪು ತನ್ನ ಕತ್ತಿಯಿಂದ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಹುತಾತ್ಮರಾದವರು. ಎಪಿಜೆ ಅಬ್ದುಲ್ ಕಲಾಂ ತಮ್ಮ ವಿಂಗ್ಸ್ ಆಫ್ ಫೈರ್ ಪುಸ್ತಕದಲ್ಲಿ ಭಾರತ ಇಂದು ಯಾವುದೇ ಕ್ಷಿಪಣಿ ತಂತ್ರಜ್ಞಾನ ಮತ್ತು ರಾಕೆಟ್ ತಂತ್ರಜ್ಞಾನವನ್ನು ಹೊಂದಿದ್ದರೂ, ನಾವು ಟಿಪ್ಪುವಿನ ಕನಸುಗಳನ್ನು ನನಸಾಗಿಸುತ್ತಿದ್ದೇವೆ ಎಂದು ಬರೆದಿದ್ದಾರೆ. ಗಾಂಧಿ ತಮ್ಮ ಯಂಗ್ ಇಂಡಿಯಾ ನಿಯತಕಾಲಿಕದಲ್ಲಿ ಟಿಪ್ಪು ಸುಲ್ತಾನ್ ಹಿಂದೂ-ಮುಸ್ಲಿಂ ಏಕತೆಗೆ ಉದಾಹರಣೆ ಎಂದು ಬರೆದಿದ್ದಾರೆ. ಅದರೆ ಬಿಜೆಪಿ ಹಿಂದೂ ಮತ್ತು ಮುಸ್ಲಿಮರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net