ಲಿಫ್ಟ್ ಸಮಸ್ಯೆಯ ಗಲಾಟೆ; SBI ಮ್ಯಾನೇಜರ್​ ಕೆನ್ನೆಗೆ ಬಾರಿಸಿದ ಕರುಣಾನಿಧಿ ಮೊಮ್ಮಗಳು, ವಿಡಿಯೋ ವೈರಲ್..Kayalvizhi

Ex-Union Minister's Daughter Slaps SBI Branch Manager In Chennai
Ex-Union Minister's Daughter Slaps SBI Branch Manager In Chennai
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡದಲ್ಲಿದ್ದ ಲಿಫ್ಟ್ ಸರಿಯಾಗಿ ಕೆಲಸ ಮಾಡದ ವಿಚಾರವಾಗಿ ಉಂಟಾದ ವಿವಾದ.
  • ಎಂ.ಕೆ. ಅಲಗಿರಿ ಪುತ್ರಿ ಕಾಯಲ್ವಿಳಿ ವಿರುದ್ಧ ದೂರು ಕೊಟ್ಟ ಬ್ಯಾಂಕ್ ಮ್ಯಾನೇಜರ್ ಹರ್ಷಿನ್ ಸಿಂಗ್.
  • ಬ್ಯಾಂಕ್ ಅಧಿಕಾರಿಯ ದೂರಿನ ಮೇರೆಗೆ ಪೊಲೀಸರಿಂದ ಎಫ್‌ಐಆರ್ ದಾಖಲು
Ex-Union Minister's Daughter Slaps SBI Branch Manager In Chennai: ತಮಿಳುನಾಡಿನ ಮಾಜಿ ಸಿಎಂ ಎಂ. ಕರುಣಾನಿಧಿ ಮೊಮ್ಮಗಳು ಹಾಗೂ ಕೇಂದ್ರ ಸಚಿವ ಎಂ.ಕೆ. ಅಲಗಿರಿ ಅವರ ಪುತ್ರಿ ಕಾಯಲ್ವಿಳಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎನ್‌ಆರ್‌ಐ ಶಾಖೆಯ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಜುಲೈ 20 ರಂದು ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎನ್‌ಆರ್‌ಐ ಶಾಖೆಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಾಗಿತ್ತು?
ಬ್ಯಾಂಕ್‌ನ ಲಿಫ್ಟ್ ಸರಿಯಾಗಿ ಕೆಲಸ ಮಾಡದ ವಿಚಾರವಾಗಿ ನಡೆದ ಮಾತಿನ ಚಕಮಕಿಯ ವೇಳೆ ಕಾಯಲ್ವಿಳಿ ಅವರು ಮ್ಯಾನೇಜರ್​ ಅವರ ಕಪಾಳಕ್ಕೆ ಬಾರಿಸಿರುವದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು,. ಸದ್ಯ ಅವು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಎಸ್‌ಬಿಐ ಎನ್‌ಆರ್‌ಐ ಶಾಖೆಯು ಕಾರ್ಯಾಚರಣೆ ನಡೆಸುತ್ತಿರುವ ವಾಣಿಜ್ಯ ಕಟ್ಟಡವು ಕಾಯಲ್ವಿಳಿಯವರಿಗೆ ಸೇರಿದ್ದಾಗಿದೆ. ಕಟ್ಟಡದ ಲಿಫ್ಟ್ ಸರಿಯಾಗಿ ಕೆಲಸ ಮಾಡದ ಕಾರಣ, ಶಾಖಾ ವ್ಯವಸ್ಥಾಪಕ ಹರ್ಷಿನ್ ಸಿಂಗ್ ಅವರು ಮೊದಲು ಆಸ್ತಿ ನಿರ್ವಹಣಾ ಸಿಬ್ಬಂದಿಗೆ ದೂರು ನೀಡಿದ್ದರು. ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಈ ದೂರನ್ನು ಕಾಯಲ್ವಿಳಿ ಅವರ ಗಮನಕ್ಕೆ ತರಲಾಗಿತ್ತು.
ದೃಶ್ಯಗಳಲ್ಲಿ ಏನಿದೆ?
ಜುಲೈ 20 ರಂದು ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಕಾಯಲ್ವಿಳಿ, ಲಿಫ್ಟ್ ಸಮಸ್ಯೆ ಕುರಿತು ಮ್ಯಾನೇಜರ್ ಹರ್ಷಿನ್ ಸಿಂಗ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಕಾಯಲ್ವಿಳಿ ಅವರು ಮ್ಯಾನೇಜರ್ ಕೊಠಡಿಯೊಳಗೆ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಮ್ಯಾನೇಜರ್​​ ನಿಂತ ಪರಿಯನ್ನು ವ್ಯಂಗ್ಯ ಮಾಡಿದ ಕಾಯಲ್ವಿಳಿ, ಬಳಿಕ ಅವರ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಮತ್ತೊಬ್ಬ ವ್ಯಕ್ತಿಯು ಕಾಯಲ್ವಿಳಿಯವರ ಕೈ ಹಿಡಿದು ಅವರನ್ನು ಶಾಂತಗೊಳಿಸಲು ಯತ್ನಿಸುತ್ತಿರುವುದು ದೃಶ್ಯದಲ್ಲಿದೆ.
ಬ್ಯಾಂಕ್ ಶಾಖೆಯು ಕಾರ್ಯಾಚರಣೆ ನಡೆಸುತ್ತಿರುವ ಕಟ್ಟಡವು ಕಾಯಲ್ವಿಳಿಯವರಿಗೆ ಸೇರಿದ್ದು ಎನ್ನಲಾಗಿದೆ. ಕಟ್ಟಡದ ಲಿಫ್ಟ್ ಸರಿಯಾಗಿ ಕೆಲಸ ಮಾಡದ ಕಾರಣದಿಂದಾಗಿ ಉಂಟಾದ ವಿವಾದವೇ ಈ ಮಾತಿನ ಚಕಮಕಿ ಹಾಗೂ ಹಲ್ಲೆಗೆ ಪ್ರಮುಖ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಕೇಸ್ ದಾಖಲು

ಎಸ್‌ಬಿಐ ಅಧಿಕಾರಿಯೊಬ್ಬರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಆರೋಪದಡಿ ಕಾಯಲ್ವಿಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜುಲೈ 20 ರಂದು ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರಿದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net