ವಿಜಯ್ ರಾಜಕೀಯ ಶೈಲಿಯು ಸಾಂಪ್ರದಾಯಿಕ ದ್ರಾವಿಡ ಮಾದರಿಯಿಂದ ಸಂಪೂರ್ಣ ದೂರವಿದ್ದು, ಬಿಳಿ ಪಂಚೆ, ಶರ್ಟ್ ಬದಲಾಗಿ ಬ್ಲೇಜರ್ ಮತ್ತು ಟ್ರೌಸರ್ ಧರಿಸುವ ಮೂಲಕ ಅವರು ಹೊಸ ತಲೆಮಾರಿನ ಯುವ ಪೀಳಿಗೆಗೆ ಹತ್ತಿರವಾಗುತ್ತಿದ್ದಾರೆ. ವಿಜಯ್ ಸಿದ್ಧಾಂತವು ಪೆರಿಯಾರ್, ಅಂಬೇಡ್ಕರ್, ಕಾಮರಾಜ್ ಮತ್ತು ತಮಿಳು ಹೋರಾಟಗಾರ್ತಿಯರ ತತ್ವಗಳ ಮಿಶ್ರಣವಾಗಿದ್ದು, ಇದನ್ನು ನವ-ದ್ರಾವಿಡ ಚಿಂತನೆ ಎಂದು ವಿಶ್ಲೇಷಿಸಲಾಗಿದೆ.