ಬ್ಲಡಿ ಹೆಲ್​!...ಬಂಗಾಳದಲ್ಲಿ ಕೇಸರಿ ಅಲೆ ನೋಡಿ ಬೆಚ್ಚಿಬಿದ್ರಾ ಒಮರ್ ಅಬ್ದುಲ್ಲಾ..? ವೈರಲ್ ಆಯ್ತು ಸಿಎಂ ಪೋಸ್ಟ್! | Omar Abdullah Tweet

Omar Abdullah Tweet | ವೈರಲ್ ಆಯ್ತು ಸಿಎಂ ಪೋಸ್ಟ್!
Omar Abdullah Tweet | ವೈರಲ್ ಆಯ್ತು ಸಿಎಂ ಪೋಸ್ಟ್!
Published on
Omar Abdullah Tweet: ರಾಷ್ಟ್ರ ರಾಜಕಾರಣದಲ್ಲಿ ಇಂದು ಮಹತ್ತರ ದಿನವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದಶಕದ ಮಮತಾ ಬ್ಯಾನರ್ಜಿ ಆಳ್ವಿಕೆಗೆ ಬಿಜೆಪಿ ಬ್ರೇಕ್ ಹಾಕಿದ್ದರೆ, ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ತನ್ನ ಚೊಚ್ಚಲ ಪ್ರಯತ್ನದಲ್ಲೇ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಂಗಾಳದಲ್ಲಿ 'ಕಮಲ' ಕ್ರಾಂತಿ

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದ 293 ಸ್ಥಾನಗಳ ಪೈಕಿ ಬಿಜೆಪಿ 198 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಆಡಳಿತಾರೂಢ ಟಿಎಂಸಿ ಕೇವಲ 89 ಸ್ಥಾನಗಳಿಗೆ ಕುಸಿದಿದೆ. 2021 ರಲ್ಲಿ 77 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಭರ್ಜರಿ ಜಯ ದಾಖಲಿಸಿ ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಫಲಿತಾಂಶದ ನಡುವೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬ್ಲಡಿ ಹೆಲ್​ (Bloody Hell) ಎಂಬ ಪದಗಳು ಚರ್ಚೆಗೆ ಗ್ರಾಸವಾಗಿವೆ.
ಇನ್ನೊಂದೆಡೆ, ತಮಿಳುನಾಡಿನಲ್ಲಿ ಸಿನೆಮಾ ಶೈಲಿಯಲ್ಲೇ ರಾಜಕೀಯ ಪ್ರವೇಶ ಮಾಡಿದ ವಿಜಯ್ ನೇತೃತ್ವದ ಟಿವಿಕೆ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ್ದು, 234 ಸ್ಥಾನಗಳ ಪೈಕಿ ಟಿವಿಕೆ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತಕ್ಕೆ (118) ಕೇವಲ 8 ಸ್ಥಾನಗಳ ದೂರದಲ್ಲಿದೆ. ಆಕ್ಸಿಸ್ ಮೈ ಇಂಡಿಯಾ ಹೊರತುಪಡಿಸಿ ಬೇರೆಲ್ಲಾ ಸಮೀಕ್ಷೆಗಳು ವಿಜಯ್ ಹವಾ ಕಂಡು ಬೆಚ್ಚಿಬಿದ್ದಿವೆ. ಸದ್ಯಕ್ಕೆ ಎಐಎಡಿಎಂಕೆ 54 ಮತ್ತು ಆಡಳಿತಾರೂಢ ಡಿಎಂಕೆ 72 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net