ಬೆಂಗಳೂರಿಗರಲ್ಲಿ ಆತಂಕ ಅನಗತ್ಯ: ಆದ್ದರಿಂದ, ಬೆಂಗಳೂರಿನ ರೆಸ್ಟೋರೆಂಟ್ಗಳು, ಹೊಟೇಲ್ಗಳು ಮತ್ತು ಮೆಸ್ಗಳಿಗೆ ಎಲ್ಪಿಜಿ ನಿರ್ಬಂಧಗಳು ಕಾಡುತ್ತಿವೆ. ಇವುಗಳ ಮೇಲೆ ಅವಲಂಬಿತ ಅನೇಕ ಕಾರ್ವಿುಕರು ಮತ್ತು ವಿದ್ಯಾರ್ಥಿಗಳ ಕಳವಳ ಅನಗತ್ಯವಾಗಿದೆ. ತಾಳ್ಮೆ ಮುಖ್ಯ. ಬೆಲೆಗಳು ಇಳಿಯುತ್ತವೆ. ಒಂದು ವೇಳೆ ನನ್ನ ವಿಶ್ಲೇಷಣೆ ತಪ್ಪಾಗಿದ್ದರೆ, 2023 ನಿಮಗೆ ನೆನಪಿದೆಯೇ? ತೈಲ ಬೆಲೆ ಕಳೆದ ಆರು ತಿಂಗಳುಗಳ ಕಾಲ 75 ಡಾಲರ್ಗಿಂತ ಮೇಲೆಕ್ಕಿತ್ತು ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ 98 ಡಾಲರ್ ಗರಿಷ್ಠ ಮಟ್ಟಕ್ಕೆ ತಲುಪಿತು. ಆದರೂ ಭಾರತದ ಜಿಡಿಪಿ 2023ರಲ್ಲಿ ಶೇ. 8ರಷ್ಟು ವೃದ್ಧಿಸಿತು. ಕರ್ನಾಟಕದ ಜಿಡಿಪಿ ಇದಕ್ಕಿಂತ ಇನ್ನೂ ಶೇ. 2ರಷ್ಟು ಹೆಚ್ಚಿತ್ತು. ಬಿಎಸ್ಇ ಸೂಚ್ಯಂಕ ಶೇ. 18ಕ್ಕಿಂತ ಹೆಚ್ಚು ರಿಟರ್ನ್ ನೀಡಿತು. ಯಾವುದೇ ತೈಲ ಬಿಕ್ಕಟ್ಟು ಎದುರಾಗುವ ಲಕ್ಷಣಗಳಿಲ್ಲ. ಇಂದಿನ ಬೆಲೆಗಳನ್ನು ನೋಡಿ ಹೆದರುವ ಬದಲು, ಭವಿಷ್ಯದತ್ತ ಗಮನಹರಿಸಿ. ಶೀಘ್ರದಲ್ಲೇ ಬರಲಿರುವ ತೈಲ ಬೆಲೆಗಳ ಇಳಿಕೆಯನ್ನು ಅರ್ಥ ಮಾಡಿಕೊಳ್ಳಿ.