ಅನ್ನಪೂರ್ಣ ಯೋಜನೆಗಾಗಿ ಬಿಡುಗಡೆ ಮಾಡಲಾಗಿರುವ ಫಾರ್ಮ್ ಬರೋಬ್ಬರಿ 11 ಪುಟಗಳಷ್ಟು ಸುದೀರ್ಘವಾಗಿದ್ದು, ಇದರಲ್ಲಿ ಕುಟುಂಬದ ಬ್ಯಾಂಕ್ ದಾಖಲೆಗಳಿಂದ ಹಿಡಿದು ಜಮೀನಿನ ಪತ್ರಗಳವರೆಗೆ ಎಲ್ಲಾ ಕಠಿಣ ಮಾಹಿತಿಯನ್ನು ಕೇಳಲಾಗಿದೆ. ಇದು ತೃಣಮೂಲ ಕಾಂಗ್ರೆಸ್‌ನ ‘ಲಕ್ಷ್ಮಿ ಭಂಡಾರ್’ ಯೋಜನೆಗಿಂತ ಅತ್ಯಂತ ಕಷ್ಟಕರವಾಗಿದೆ ಎಂದು ವಿಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿದ್ದವು. ಇದಕ್ಕೆ ಕಟು ಪ್ರತ್ಯುತ್ತರ ನೀಡಿರುವ ಸುವೇಂದು ಅಧಿಕಾರಿ, ನಾವು ಈ ಯೋಜನೆಯ ಹಣ ನಿಜವಾದ ಅರ್ಹ ಬಡ ಮಹಿಳೆಯರಿಗೆ ತಲುಪಬೇಕೆಂದು ಬಯಸುತ್ತೇವೆ. ಯಾವುದೇ ಕಾರಣಕ್ಕೂ ಸೋಗುಲಾಡಿಗಳು, ಪುರುಷರು ಅಥವಾ ಭಾರತೀಯ ಪೌರತ್ವ ಇಲ್ಲದ ಅಕ್ರಮ ನುಸುಳುಕೋರರ ಕೈಗೆ ಈ ಹಣ ಸಿಗದಂತೆ ತಡೆಯಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಫಾರ್ಮ್ ಸರಳಗೊಳಿಸುವ ಕುರಿತು ಸಚಿವೆ ಅಗ್ನಿಮಿತ್ರ ಪಾಲ್ ಈಗಾಗಲೇ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಎಚ್ಚರಿಸಿದ್ದಾರೆ.