ಮಗು ಶಾಲೆಯಿಂದ ಮನೆಗೆ ಮರಳಿದಾಗ ಆತನ ಮುಖ ಊದಿಕೊಂಡಿರುವುದು ಮತ್ತು ಗಾಯದ ಗುರುತುಗಳನ್ನು ಕಂಡು ಪೋಷಕರು ಗಾಬರಿಗೊಂಡಿದ್ದು, ತಕ್ಷಣವೇ ಶಾಲೆಗೆ ಧಾವಿಸಿದ್ದು, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ, ಈ ಗಂಭೀರ ಘಟನೆಯನ್ನು ಗಣನೆಗೆ ತೆಗೆದುಕೊಂಡಿರುವ ಶಾಲಾ ಆಡಳಿತ ಮಂಡಳಿಯು ಹಲ್ಲೆ ನಡೆಸಿದ ಕ್ಲಾಸ್ ಮಾನಿಟರ್ ಅನ್ನು ಶಾಲೆಯಿಂದ ಉಚ್ಚಾಟಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).