ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಿಂದ ಗೋಪಾಲನಹಳ್ಳಿಯಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡಿ, ಶಿಬಿರಗಳ ಮೂಲಕ ಹಳ್ಳಿಗಳಲ್ಲಿರುವ ದ್ವೇಷದ ಭಾವನೆ ದೂರವಾಗಿ ನಾವೆಲ್ಲರೂ ಒಂದು ಎನ್ನುವ ಭಾವ ಬೆಳೆಯಬೇಕು. ಎನ್ಎಸ್ಎಸ್ ಉದ್ದೇಶ ಅರಿವು ಮೂಡಿಸುವ ಕಾರ್ಯ ಆಗಿದ್ದು, ಜನರ ಆರೋಗ್ಯ, ಸ್ವಚ್ಛತೆ, ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಬೇಕು ಎಂದರು.