ಅಮೆರಿಕದ 2.9 ಕೋಟಿ ರೂ. ಸಂಬಳ ಬಿಟ್ಟು ಭಾರತಕ್ಕೆ ಮರಳಲು ಸಜ್ಜಾದ NRI: ಕಾರಣ ಕೇಳಿ ನೆಟ್ಟಿಗರು ಫಿದಾ!

NRIReturnToIndia
NRIReturnToIndia
Published on

ನವದೆಹಲಿ: ಅಮೆರಿಕದಲ್ಲಿಕಳೆದ 12 ವರ್ಷಗಳಿಂದ ನೆಲೆಸಿರುವ 36 ವರ್ಷದ ಅನಿವಾಸಿ ಭಾರತೀಯರೊಬ್ಬರು(NRI), ತಮ್ಮ ಕೈತುಂಬಾ ಸಂಬಳದ ಕೆಲಸವನ್ನುಬಿಟ್ಟು ಮರಳಿ ಭಾರತಕ್ಕೆ (ನವಿ ಮುಂಬೈ) ಬರಲು ನಿರ್ಧರಿಸಿದ್ದಾರೆ.

ತಮ್ಮ ಮಕ್ಕಳುಅಜ್ಜ-ಅಜ್ಜಿಯ ಜೊತೆ ಬೆಳೆಯಬೇಕು ಎಂಬ ಉದ್ದೇಶದಿಂದ ಅವರು ಈ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಆರ್ಥಿಕ ಸ್ಥಿತಿಗತಿಮತ್ತು ಭಾರತದ ಆಫರ್

ರೆಡ್ಡಿಟ್(Reddit) ವೇದಿಕೆಯಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿರುವ ಅವರು, ಪ್ರಸ್ತುತ ಅಮೆರಿಕದಲ್ಲಿ ಎಚ್-1ಬಿ(H1B) ವೀಸಾದಲ್ಲಿದ್ದಾರೆ.

ಅಮೆರಿಕದವಾರ್ಷಿಕ ಆದಾಯ: ಸುಮಾರು2.9 ಕೋಟಿ ರೂ. ($320,000).

ಒಟ್ಟು ಆಸ್ತಿಮೌಲ್ಯ: ಸುಮಾರು 9.06ಕೋಟಿ ರೂ. ($1.1 Million), ಜೊತೆಗೆ ಸಾಲಮುಕ್ತ ಸ್ವಂತ ಮನೆ.

ಭಾರತದಲ್ಲಿಸಿಕ್ಕಿರುವ ಕೆಲಸದ ಆಫರ್:ವಾರ್ಷಿಕ 1.5 ಕೋಟಿ ರೂ. ಪ್ಯಾಕೇಜ್.‌

ಕುಟುಂಬವೇಮೊದಲ ಆದ್ಯತೆ

"ನನ್ನಪೋಷಕರು ಹೈದರಾಬಾದ್‌ನಲ್ಲಿದ್ದಾರೆ. ನಾವು ನವಿ ಮುಂಬೈಗೆ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ನಮ್ಮಮೂವರು ಮಕ್ಕಳು ತಮ್ಮ ಅಜ್ಜ-ಅಜ್ಜಿ ಮತ್ತು ಸಂಬಂಧಿಕರ ಜೊತೆ ಬೆಳೆಯಬೇಕೆಂಬುದು ನಮ್ಮ ಆಸೆ. ಆದರೆ,ಅಮೆರಿಕದ ಐಷಾರಾಮಿ ಜೀವನ ಮತ್ತು ಇಷ್ಟೊಂದು ದೊಡ್ಡ ಸಂಬಳ ಬಿಟ್ಟು ಬರುವುದು ಸರಿಯಾದ ನಿರ್ಧಾರವೇ?"ಎಂದು ಅವರು ನೆಟ್ಟಿಗರ ಸಲಹೆ ಕೇಳಿದ್ದಾರೆ.

ನೆಟ್ಟಿಗರಪ್ರತಿಕ್ರಿಯೆ ಹೇಗಿದೆ?

ಈ ಪೋಸ್ಟ್ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು, ಬಹುತೇಕರು ಇವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಜೀವನಶೈಲಿ: "ಭಾರತದಲ್ಲಿ 1.5 ಕೋಟಿ ರೂ. ಸಂಬಳ ಎಂದರೆಅದು ಅತ್ಯುತ್ತಮ ಜೀವನಶೈಲಿಯನ್ನು ನೀಡುತ್ತದೆ. ಅಮೆರಿಕಕ್ಕಿಂತಲೂ ಉತ್ತಮವಾಗಿ ಇಲ್ಲಿ ಬದುಕಬಹುದು"ಎಂದು ಒಬ್ಬರು ಸಲಹೆ ನೀಡಿದ್ದಾರೆ.

ಉಳಿತಾಯ: "ನೀವು ಭಾರತದಲ್ಲಿ ನಿಮ್ಮ ಸಂಬಳದ ಶೇ.50ಕ್ಕಿಂತ ಹೆಚ್ಚು ಹಣವನ್ನು ಉಳಿಸಬಹುದು. ಪೋಷಕರ ಜೊತೆಗಿರುವ ಸುಖ ಯಾವುದಕ್ಕೂ ಸಾಟಿಯಿಲ್ಲ"ಎಂದು ಇನ್ನೊಬ್ಬರು ಬರೆದಿದ್ದಾರೆ.

ಮಕ್ಕಳ ಭವಿಷ್ಯ: 30ರ ಹರೆಯದಲ್ಲೇ ಮೂವರು ಮಕ್ಕಳನ್ನು ಹೊಂದಿರುವುದುಮತ್ತು ಅವರಿಗೆ ಸಂಸ್ಕಾರ ನೀಡಲು ಭಾರತಕ್ಕೆ ಬರುತ್ತಿರುವುದು ನಿಜವಾದ ಶ್ರೀಮಂತಿಕೆ ಎಂದು ಹಲವರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net