ಸೋಪಾದಿಂದ ಎದ್ದೇಳುವಾಗ ಸೊಂಟದಲ್ಲಿದ್ದ ಪಿಸ್ತೂಲ್ನಿಂದ ಗುಂಡು ಸಿಡಿತ; ಎನ್ಆರ್ಐ ಸಾವು | NRI dies
ಹರ್ಪಿಂದರ್ ಸಿಂಗ್
Published on:
Copied
Follow Us
ಚಂಡೀಗಢ: ಪಂಜಾಬ್ನ ಫಿರೋಜ್ಪುರದಲ್ಲಿ ಸೋಪಾದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಮೇಲೆ ಎದ್ದೇಳುವಾಗ ಸೊಂಟದಲ್ಲಿದ್ದ ಪಿಸ್ತೂಲ್ನಿಂದ ಗುಂಡು ಸಿಡಿದಿದ್ದು, ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ(dies) ಎಂದು ಮಂಗಳವಾರ(ಡಿ. 30) ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಅನಿವಾಸಿ ಭಾರತೀಯನಾಗಿದ್ದು ಇತ್ತೀಚೆಗೆ ಧನಿ ಸುಚಾ ಸಿಂಗ್ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಘಟನೆ ನಡೆದಾಗ ಹರ್ಪಿಂದರ್ ತನ್ನ ಸಂಬಂಧಿಯೊಂದಿಗೆ ಸೋಫಾದಲ್ಲಿ ಕುಳಿತಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮೃತ ವ್ಯಕ್ತಿ ಸೋಪಾದಲ್ಲಿ ಸಂಬಂಧಿಯೊಂದಿಗೆ ಕುಳಿತಿದ್ದು, ಎದ್ದೇಳುವಾಗ ಪಿಸ್ತೂಲ್ನಿಂದ ಗುಂಡು ಹೊಟ್ಟೆಗೆ ಹಾರಿದೆ. ಗುಂಡೇಟಿನ ಶಬ್ದದ ಬಳಿಕ ಕುಟುಂಬಸ್ಥರು ಅವರ ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹರ್ಪಿಂದರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಬಳಿಕ ಪೊಲೀಸರು ತಂದೆ ದರ್ಶನ್ ಸಿಂಗ್ ಅವರ ಹೇಳಿಕೆ ದಾಖಲಿಸಿಕೊಂಡು ಬಿಎನ್ಎಸ್ ಸೆಕ್ಷನ್ 194 ರ ಅಡಿಯಲ್ಲಿ ಕ್ರಮ ಕೈಗೊಂಡ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ವಿದೇಶದಿಂದ ಹಿಂದಿರುಗಿ ವಿವಾಹವಾಗಿದ್ದ ಹರ್ಪಿಂದರ್ ಅವರಿಗೆ ಎರಡು ವರ್ಷದ ಹೆಣ್ಣು ಮಗುವಿದೆ ಎನ್ನಲಾಗಿದೆ (ಏಜೆನ್ಸೀಸ್).