ಭಾರತ ತೊರೆಯುವಂತೆ ನೋಟಿಸ್; ಬಾಲಿವುಡ್ ನಟ ಇಮ್ರಾನ್​ ಖಾನ್​ಗೆ ರಿಲೀಫ್: ನ. 02ಕ್ಕೆ ವಿಚಾರಣೆ ಮುಂದೂಡಿಕೆ | Imran Khan

ಎಸ್​ಐಆರ್ ವಿರೋಧಿ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಭಾರತ ತೊರೆಯುವಂತೆ ನೋಟಿಸ್ ಪಡೆದಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್​ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಮತ್ತು ಮುಂದಿನ ವಿಚಾರಣೆಯವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದೆ.
ಭಾರತ ತೊರೆಯುವಂತೆ ನೋಟಿಸ್; ಬಾಲಿವುಡ್ ನಟ ಇಮ್ರಾನ್​ ಖಾನ್​ಗೆ ರಿಲೀಫ್: ನ. 02ಕ್ಕೆ ವಿಚಾರಣೆ ಮುಂದೂಡಿಕೆ | Imran Khan
Published on: 

ಮುಂಬೈ: ಎಸ್​ಐಆರ್ ವಿರೋಧಿ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಭಾರತ ತೊರೆಯುವಂತೆ ನೋಟಿಸ್ ಪಡೆದಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್​ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಮತ್ತು ಮುಂದಿನ ವಿಚಾರಣೆಯವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಮೂಲತಃ ಅಮೆರಿಕದ ಪ್ರಜೆಯಾಗಿದ್ದು, ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್​​ನಲ್ಲಿ ಭಾರತದಲ್ಲಿ ಇಮ್ರಾನ್ ಖಾನ್, ಅ. 10ರಂದು ದೆಹಲಿಯಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಗೆ ಬೆಂಬಲ ನೀಡಿ ಅದರಲ್ಲಿ ಭಾಗವಹಿಸಿದ್ದರು. ಇದನ್ನೂ ಪ್ರಶ್ನಿಸಿ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನನ್ವಯ ಪೊಲೀಸರು, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮಾಹಿತಿ ನೀಡಿದ ಹಿನ್ನಲೆ, ವಿದೇಶಿಯರ ಕಾಯ್ದೆ, 2025ರ ಅಡಿಯಲ್ಲಿ ಅ. 28 ರೊಳಗೆ ಭಾರತವನ್ನು ತೊರೆಯುವಂತೆ ಇಮ್ರಾನ್​ ಖಾನ್​ಗೆ ಎಫ್​ಆರ್​​ಆರ್​ಓ ಗಡಿಪಾರು ನೋಟಿಸ್ ನೀಡಿತ್ತು. ಈ ನೋಟಿಸ್ ಪ್ರಶ್ನಿಸಿ ಇಮ್ರಾನ್ ಖಾನ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Also Read
ಸ್ಟಿಂಗ್ ಆಪರೇಷನ್ ವಿಚಾರ ಹೈಕಮಾಂಡ್ ಗಮನದಲ್ಲಿದೆ: ಪಾರದರ್ಶಕವಾಗಿ ತನಿಖೆಯಾಗಲಿ: ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah
ಭಾರತ ತೊರೆಯುವಂತೆ ನೋಟಿಸ್; ಬಾಲಿವುಡ್ ನಟ ಇಮ್ರಾನ್​ ಖಾನ್​ಗೆ ರಿಲೀಫ್: ನ. 02ಕ್ಕೆ ವಿಚಾರಣೆ ಮುಂದೂಡಿಕೆ | Imran Khan

ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಮತ್ತು ಪ್ರತಿಭಟನೆಯ ಆಯೋಜಕರೊಂದಿಗೆ ಸಂಬಂಧ ಹೊಂದಿಲ್ಲ ಕೋರ್ಟ್​ಗೆ ಸಲ್ಲಿಸಿದ ಅರ್ಜಿ ಹೇಳಿದ್ದಾರೆ. ನೋಟಿಸ್ ಕಾನೂನುಬಾಹಿರ, ಅನಿಯಂತ್ರಿತ, ವಿಕೃತ ಮತ್ತು ಕಠಿಣ ಎಂದು ವಾದಿಸಿದ್ದಾರೆ.

ಇನ್ನೂ ಇಂದು ನಡೆದ ವಿಚಾರಣೆ ವೇಳೆ ಖಾನ್ ಅವರ ವಕೀಲ ವೆಂಕಟೇಶ್ ಧೋಂಡ್ ಅವರು ಅಕ್ಟೋಬರ್ 28ರ ಗಡುವನ್ನು ಉಲ್ಲೇಖಿಸಿದರು. ನಂತರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಬಳಿಕ ಕೋರ್ಟ್ ವಿಚಾರಣೆಯನ್ನು ನ. 02ಕ್ಕೆ ಮುಂದೂಡಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net