_1785831791965.webp?w=480&auto=format%2Ccompress&fit=max)
_1785831791965.webp?w=480&auto=format%2Ccompress&fit=max)
ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ತೀರ್ಪು ರಾಜ್ಯ ರಾಜಕೀಯದಲ್ಲಿ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಿಜೆಪಿಯ ನೀರಜ್ ಕುಮಾರ್ ಅವರನ್ನು 19,324 ಮತಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ, ಕಳೆದ 35 ವರ್ಷಗಳಿಂದ ಆ ಕ್ಷೇತ್ರದಲ್ಲಿ ನೆಲೆಸಿದ್ದ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದಾರೆ. ಈ ಕ್ಷೇತ್ರವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕುಟುಂಬದ ಸಾಂಪ್ರದಾಯಿಕ ನೆಲೆ ಎನಿಸಿಕೊಂಡಿತ್ತು.
ಈ ಚುನಾವಣೆಯ ನಿಜವಾದ ಕಥೆ ಬಿಜೆಪಿಯ ಸೋಲಷ್ಟೇ ಅಲ್ಲ, ಬಿಹಾರದ ಪ್ರಮುಖ ವಿಪಕ್ಷವಾದ ರಾಷ್ಟ್ರೀಯ ಜನತಾ ದಳದ ದೊಡ್ಡ ಹಿನ್ನಡೆ. ಆರ್‌ಜೆಡಿ ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಜನ ಸುರಾಜ್ ಪಾರ್ಟಿ, ಈಗ ಪ್ರಶಾಂತ್ ಕಿಶೋರ್ ಗೆಲುವಿನ ಮೂಲಕ ಬಿಹಾರ ವಿಧಾನಸಭೆಗೆ ಪ್ರವೇಶ ಪಡೆದಿದೆ. ಬಿಜೆಪಿ ರಾಜ್ಯದ ಆಡಳಿತ ಪಕ್ಷವಾಗಿ ಉಳಿದುಕೊಂಡಿದೆಯಾದರೂ, ಆರ್‌ಜೆಡಿಗೆ ಈ ಫಲಿತಾಂಶವು ತನ್ನ ಅಸ್ತಿತ್ವದ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಪಿಕೆ ಕಡೆಗೆ ವಾಲಿದ್ದೇಕೆ ಮುಸ್ಲಿಂ ಮತದಾರರು...?