ಬಂಗಾಳಕ್ಕೆ ಒಂದೇ ಒಂದು ಪೈಸೆ ನೀಡಿಲ್ಲ: ಇದೊಂದು ಸುಳ್ಳಿನ ಕೊಂಪೆ; ಬಜೆಟ್​ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ | Union Budget

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on: 

ಪ್ರಮುಖ ಮುಖ್ಯಾಂಶಗಳು

  • ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕೇಂದ್ರ ಬಜೆಟ್ ಮಂಡನೆ
  • ಬಂಗಾಲಕ್ಕೆ ಒಂದೇ ಒಂದು ಪೈಸೆಯನ್ನು ನೀಡಿಲ್ಲ ಎಂದ ಸಿಎಂ ಮಮತಾ ಬ್ಯಾನರ್ಜಿ
  • ಕೇಂದ್ರ ಸರ್ಕಾರ ರಾಜ್ಯಗಳ ಸಾರ್ವಭೌಮತ್ವವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪ
ಪಶ್ಚಿಮಬಂಗಾಳ: 2026 ರ ಕೇಂದ್ರ ಬಜೆಟ್ (Union Budget) ಕುರಿತು ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸುತ್ತಾ, ಸರ್ಕಾರವು ದೇಶದ ದಾರಿಯನ್ನು ತಪ್ಪಿಸುತ್ತಿದೆ ಮತ್ತು ಬಂಗಾಳಕ್ಕೆ ಸಿಗಬೇಕಾದ ಹಣದ ಪಾಲನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಹೊಸ ಆರ್ಥಿಕ ಕಾರಿಡಾರ್‌ಗಳ ಬಗ್ಗೆ ಮಾಡಲಾದ ಹೇಳಿಕೆಗಳನ್ನು ತಳ್ಳಿಹಾಕಿದ ಬ್ಯಾನರ್ಜಿ, ಕೇಂದ್ರವು ಜನರಿಗೆ ನಿಜವಾದ ಪ್ರಯೋಜನಗಳನ್ನು ನೀಡುವ ಬದಲು ತನ್ನ ಕುತಂತ್ರಮಯಿ ಮಾತಿನ ಮೂಲಕ ಜನರನ್ನು ಭ್ರಮಿತಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಬಜೆಟ್ ಘೋಷಣೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬ್ಯಾನರ್ಜಿ, ಕೇಂದ್ರವು ಉಲ್ಲೇಖಿಸಿದ ಯೋಜನೆಗಳು ಈಗಾಗಲೇ ರಾಜ್ಯ ಸರ್ಕಾರದ ಅಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು. "ಮೂರು ಕಾರಿಡಾರ್‌ಗಳ ಬಗ್ಗೆ ಅವರು ಹೇಳಿದ್ದು ಸಂಪೂರ್ಣವಾಗಿ ಸುಳ್ಳಿನ ಕಸ. ಅದು ಈಗಾಗಲೇ ಪ್ರಕ್ರಿಯೆಯಲ್ಲಿದೆ ಮತ್ತು ನಾವು ಆ ಯೋಜನೆ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.
ಪುರುಲಿಯಾದಲ್ಲಿನ ಜಂಗಲ್‌ಮಹಲ್ ಜಂಗಲ್ ಸುಂದರಿ ಯೋಜನೆಯನ್ನು ಉಲ್ಲೇಖಿಸಿ, ಕೇಂದ್ರದ ಯಾವುದೇ ಬೆಂಬಲವಿಲ್ಲದೆ ಆರ್ಥಿಕ ಕಾರಿಡಾರ್‌ಗಾಗಿ ಈಗಾಗಲೇ 72,000 ಕೋಟಿ ರೂ.ಗಳ ಹೂಡಿಕೆಗಳನ್ನು ಯೋಜಿಸಲಾಗಿದೆ ಎಂದು ಮಮತಾ ಹೇಳಿದ್ದಾರೆ.

ಬಂಗಾಳಕ್ಕೆ ಒಂದು ಪೈಸೆಯನ್ನೂ ನೀಡಿಲ್ಲ

ರಾಜ್ಯದಿಂದ ದೊಡ್ಡ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸಿದ್ದರೂ ಕೇಂದ್ರ ಸರ್ಕಾರ ಬಂಗಾಳದ ಬಾಕಿಗಳನ್ನು ಬಿಡುಗಡೆ ಮಾಡಲು ವಿಫಲವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದರು. ಅವರು ಬಂಗಾಳಕ್ಕೆ ಒಂದೇ ಒಂದು ಪೈಸೆಯನ್ನೂ ನೀಡಿಲ್ಲ. ಅವರು ನಮ್ಮ ಹಣವನ್ನು ಕಸಿದುಕೊಂಡು ನಮಗೇ ತಿರುಗಿ ನೀಡುತ್ತಾರೆ, ಆದರೆ ಅವರು ಮಾತನ್ನು ಕೇಳಿದರೆ ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿ ರೀತಿಯಲ್ಲಿ ಮಾತನಾಡುತ್ತಾರೆ, ವಾಸ್ತವದಲ್ಲಿ ಅದು ನಮ್ಮದೇ ಹಣ ಎಂದು ಬ್ಯಾನರ್ಜಿ ಹೇಳಿದರು.
ಪಶ್ಚಿಮ ಬಂಗಾಳವು ಕೇಂದ್ರದಿಂದ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಇದೆ ಎಂದು ಅವರು ಹೇಳಿಕೊಂಡಿದ್ದು, ಕೇಂದ್ರ ಸರ್ಕಾರವು ಕಾನೂನುಬದ್ಧ ಹಣವನ್ನು ತಡೆಹಿಡಿದಿದೆ ಎಂದು ಆರೋಪಿಸಿದರು. ಅವರು ಬಂಗಾಳದಿಂದ ಹಣವನ್ನು ಸರಿಯಾಗಿ ಸಂಗ್ರಹಿಸುತ್ತಾರೆ, ಆದರೆ ಮರುಪಾವತಿ ಮಾತ್ರ ಮಾಡುವುದಿಲ್ಲ ಎಂದು ಅವರು ಹೇಳಿದರು.

ಸರ್ಕಾರಕ್ಕೆ ಈ ರೀತಿ ಆಡಳಿತ ನಡೆಸಲು ಯಾವುದೇ ಅಧಿಕಾರವಿಲ್ಲ

ಕೇಂದ್ರಕ್ಕೆ ಆಡಳಿತ ನಡೆಸಲು ನೈತಿಕ ಅಧಿಕಾರವಿಲ್ಲ ಎಂದು ಹೇಳಿದರು. ಸರ್ಕಾರ ನಡೆಸಲು ಮತ್ತು ದೇಶವನ್ನು ಈ ರೀತಿ ಮುಗಿಸಲು ಅವರಿಗೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಅವರು ಹೇಳಿದರು, ಇದು ಭಾರತದ ಆರ್ಥಿಕ, ಸಾಂವಿಧಾನಿಕ ಮತ್ತು ಫೆಡರಲ್ ರಚನೆಗೆ ಹಾನಿ ಮಾಡುತ್ತಿದೆ ಎಂದು ಆರೋಪಿಸಿದರು.
ಸ್ವತಂತ್ರ ಸಂಸ್ಥೆಗಳು, ಮೂಲಸೌಕರ್ಯ, ಸಾಮಾಜಿಕ ವಲಯ ಮತ್ತು ಫೆಡರಲ್ ಚೌಕಟ್ಟನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. "ಅವರು ಹೆಚ್ಚು ಮಾತನಾಡುತ್ತಾರೆ ಆದರೆ ಕಡಿಮೆ ಕೆಲಸ ಮಾಡುತ್ತಾರೆ. ಅವರು ಕೇವಲ ಮಾತನಾಡುವುದನ್ನೇ ಕೆಲಸವೆಂದು ಭಾವಿಸಿದ್ದಾರೆ ಎಂದು ಬ್ಯಾನರ್ಜಿ ಟೀಕಿಸಿದರು,(ಏಜನ್ಸೀಸ್​).