ಮೃತ ರಚನಾ ಸಂಬಂಧಿಕರನ್ನು ಭೇಟಿಯಾಗಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು, ಆಕೆಯ ಬಳಿ ಹೋಗಿ, ನಿನ್ನ ಹೆಸರೇನು ಎಂದು ಕೇಳಿದರು. ತಾನು ಯಾರೆಂದು ಅವರಿಗೆ ಹೇಳ್ತಿದ್ದಂತೆ, ಕಿಡಿಗೇಡಿಗಳು ಆಕೆಯ ಹಣೆಗೆ ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾದರು ಎಂದು ಮೃತಳ ಸಂಬಂಧಿಕರು ತಿಳಿಸಿದ್ದಾರೆ. ಗುಂಡೇಟು ಬಿದ್ದ ಕ್ಷಣವೇ ರಚನಾ ಮೃತಪಟ್ಟಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವುದು ಪೊಲೀಸರ ಭೇಟಿ ಬಳಿಕ ಸ್ಪಷ್ಟವಾಗಿದೆ. ಸಿಸಿಟಿವಿಯಲ್ಲಿ ಆಕೆಗೆ ಗುಂಡು ಹಾರಿಸಿದ ಆರೋಪಿಯ ದೃಶ್ಯ ಸೆರೆಯಾಗಿದ್ದು, ಸ್ಪೋರ್ಟ್ಸ್ ಬೈಕ್ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ,(ಏಜೆನ್ಸೀಸ್).