ನನ್ನ ಮಗ ಸಾಯುವ ಮುನ್ನ ನನಗೆ ಫೋನ್ ಮಾಡಿದ್ದ. 'ಅಪ್ಪಾ, ನಾನು ಗುಂಡಿಗೆ ಬಿದ್ದಿದ್ದೇನೆ, ನನ್ನನ್ನು ಉಳಿಸಿಕೊಳ್ಳಿ, ನನಗೆ ಸಾಯಲು ಇಷ್ಟವಿಲ್ಲ' ಎಂದು ಫೋನ್‌ನಲ್ಲಿ ಕಿರುಚುತ್ತಿದ್ದ. ಅವನು ಸುಮಾರು ಒಂದೂವರೆ ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದ್ದಾನೆ. ಕತ್ತಲೆಯಲ್ಲಿ ಸಹಾಯಕ್ಕಾಗಿ ಮೊಬೈಲ್ ಟಾರ್ಚ್ ತೋರಿಸುತ್ತಿದ್ದ. ನಾನೂ ಕೂಡ ಅವನನ್ನು ಉಳಿಸಿಕೊಳ್ಳಲು ಓಡೋಡಿ ಬಂದೆ, ಆದರೆ ಈ ವ್ಯವಸ್ಥೆಯ ವೈಫಲ್ಯ ಅವನನ್ನು ನನ್ನಿಂದ ಮಗನನ್ನು ಕಿತ್ತುಕೊಂಡಿತು ಎಂದು ರವೀಂದರ್ ಮೆಹ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.