

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಭಾರತೀಯವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಇತ್ತೀಚೆಗೆಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿಆಯೋಜಿಸಲಾಗಿದ್ದ ‘ನೊಬೆಲ್ ಪ್ರೈಜ್ಡೈಲಾಗ್ ಇಂಡಿಯಾ 2025’ಕಾರ್ಯಕ್ರಮದಲ್ಲಿಜಗತ್ತಿನ ವಿವಿಧ ದೇಶಗಳ ನೊಬೆಲ್ಪುರಸ್ಕೃತ ತಜ್ಞರು,ವಿಜ್ಞಾನಿಗಳು,ಚಿಂತಕರು ಪಾಲ್ಗೊಂಡುಮಾತನಾಡಿದರು.
ಕಾರ್ಯಕ್ರಮದಉದ್ಘಾಟಿಸಿ ಮಾತನಾಡಿದ ಟಾಟಾಟ್ರಸ್ಟ್ ಸಿಇಓ ಸಿದ್ಧಾರ್ಥ್ಶರ್ಮಾ, ಭಾರತದನೈಸರ್ಗಿಕ ಸಂಪತ್ತಿನ ಜೊತೆಗೆಜನರ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯಅತಿದೊಡ್ಡ ಶಕ್ತಿ.ಆದ್ದರಿಂದಲೇಟಾಟಾ ಟ್ರಸ್ಟ್ ಸೆಂಟರ್ಸ್ ಆಫ್ಎಕ್ಸಲೆನ್ಸ್ ಕೇಂದ್ರಗಳನ್ನುರೂಪಿಸಿಕೊಂಡು ಬಂದಿದೆ.ಅದರ ಭಾಗವಾಗಿನೊಬೆಲ್ ಪುರಸ್ಕೃತರನ್ನು ಸಂಪರ್ಕಿಸಿಅವರ ಜ್ಞಾನವನ್ನು ಮಾನವ ಕಲ್ಯಾಣಕ್ಕೆಬಳಸಿಕೊಳ್ಳಲು ಕಾರ್ಯಕ್ರಮಆಯೋಜಿಸಲಾಗಿದೆ.ಭಾರತವು 3ನೇಅತಿದೊಡ್ಡ ಆರ್ಥಿಕತೆಯಾಗುವದಾರಿಯಲ್ಲಿದೆ.ಈ ಸಂದರ್ಭದಲ್ಲಿನಾವು ಸಾಮಾಜಿಕ,ಆರ್ಥಿಕ ಮತ್ತುರಾಜಕೀಯ ವಿಚಾರದಲ್ಲಿ ಬೆಳವಣಿಗೆಯನ್ನುಸಾಧಿಸಲು ಯುವಜನರನ್ನುಸಬಲೀಕರಣಗೊಳಿಸಬೇಕಾಗಿದೆ.ವಿಶೇಷವಾಗಿಅಗತ್ಯ ಇರುವ ವ್ಯಕ್ತಿಗಳಿಗಾಗಿಹೊಸ ಆವಿಷ್ಕಾರ ಸೃಷ್ಟಿಗೆಪ್ರೋತ್ಸಾಹಿಸಬೇಕಾಗಿದೆ.ಆ ಬದ್ಧತೆಯೊಂದಿಗೆಈ ಕಾರ್ಯಕ್ರಮ ಏರ್ಪಡಿಸಲಾಗಿದೆಎಂದರು.
ನೊಬೆಲ್ಪ್ರಶಸ್ತಿ ಪುರಸ್ಕೃತ ಡೇವಿಡ್ಮ್ಯಾಕ್‌ಮಿಲನ್ ಮಾತನಾಡಿ,ಹವಾಮಾನ ಬದಲಾವಣೆಯಸಮಸ್ಯೆಯನ್ನು ಪರಿಹರಿಸಲುವೇಗವರ್ಧಕ ಕ್ರಿಯೆಯ ಅಗತ್ಯವಿದೆ.ಈ ರೀತಿಯ ವೈಜ್ಞಾನಿಕಕ್ಷೇತ್ರಗಳು ಎಷ್ಟು ಮುಖ್ಯವೆಂದುಜಗತ್ತಿಗೆ ಅರ್ಥವಾಗುವಂತೆವಿವರಿಸಲು ನಾವು ಮತ್ತಷ್ಟುತೀವ್ರವಾಗಿ ಕೆಲಸ ಮಾಡಬೇಕು.ನಾನು ಇದೇ ಮೊದಲಬಾರಿಗೆ ಭಾರತಕ್ಕೆ ಬಂದಿದ್ದು,ಭಾರತದಲ್ಲಿನಿಜವಾದ ಆತ್ಮವಿಶ್ವಾಸ ಮತ್ತುಹೊಸತನದ ಆಕಾಂಕ್ಷೆ ಕಾಣಿಸುತ್ತಿದೆ.ಅಭಿವೃದ್ಧಿಹೊಂದಲು ಭಾರತಕ್ಕೆ ಇದು ಉತ್ತಮಸಂದರ್ಭ ಎಂದು ಹೇಳಿದರು.
ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸುವ ಮೂಲಕ, ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಒಬ್ಬರಿಂದ ಒಬ್ಬರು ಹೊಸದನ್ನು ಕಲಿಯಲು ಇಂತಹ ಸಂವಾದ ಉಪಯುಕ್ತವಾಗಿದೆ. ಇಂತಹ ಕಾರ್ಯಕ್ರಮದಿಂದ ದೊಡ್ಡ ಬದಲಾವಣೆ ತರಲು ಸಾಧ್ಯ.