ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೊದಲೇ ದೃಢೀಕೃತ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಇದರಿಂದ ವೇಟಿಂಗ್ ಲಿಸ್ಟ್ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ, ಈ ರೈಲಿನಲ್ಲಿ ಆರ್ಎಸಿ ( Reservation Against Cancellation) ವ್ಯವಸ್ಥೆ ಇರುವುದಿಲ್ಲ. ಆರ್ಎಸಿ ಅಂದರೆ, ಟ್ರೈನ್‌ನಲ್ಲಿ ಸೀಟ್ ಅಥವಾ ಬರ್ತ್ ಪೂರ್ತಿಯಾಗಿದ್ದರೂ, ರದ್ದತಿ ಆದಂತಹ ಸಮಯದಲ್ಲಿ ಲಭ್ಯವಾಗುವ ಸೀಟ್‌ಗಾಗಿ ಕಾಯುವ ವ್ಯವಸ್ಥೆಯಾಗಿದೆ. RAC ಟಿಕೆಟ್ ಪಡೆದ ಪ್ರಯಾಣಿಕರು ಒಂದೇ ಬರ್ತ್‌ನಲ್ಲಿ ಇಬ್ಬರು ಕೂತು ಪ್ರಯಾಣಿಸಬಹುದು (ಸೈಡ್ ಲೋಯರ್ ಅಥವಾ ಮಧ್ಯದಲ್ಲಿ), ಆದರೆ ಕನ್ಫರ್ಮ್ ಆದರೆ ಮಾತ್ರ ಪೂರ್ತಿ ಬರ್ತ್ ಸಿಗುತ್ತದೆ. ಆದರೆ, ಈ ವ್ಯವಸ್ಥೆ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಇರುವುದಿಲ್ಲ. ಏಕೆಂದರೆ, ಇಲ್ಲಿ ದೃಢೀಕೃತ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ.