ಸಿಜೆಐ ಗವಾಯಿ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಇಂದು ತೀರ್ಪು ಪ್ರಕಟಿಸಿದೆ. ಇನ್ನು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ ನ್ಯಾಯಾಂಗವು ಅವಧಿಯನ್ನು ವಿಧಿಸುವುದು ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ಹಿಂದಿನಿಂದಲೂ ವಾದಿಸುತ್ತಾ ಬರುತ್ತಿವೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರ ವಿವೇಚನಾ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಆಡಳಿತದ ರಾಜ್ಯಗಳು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ ಗಡುವು ವಿಧಿಸುವುದನ್ನು ಬೆಂಬಲಿಸಿದವು. ಅಂತಿಮವಾಗಿ ತೀರ್ಪು ಹೊರಬಿದ್ದಿದ್ದು, ನ್ಯಾಯಮೂರ್ತಿ ಗವಾಯಿ ಅವರು ನಿವೃತ್ತಿಗೂ ಕೆಲವೇ ದಿನಗಳ ಮೊದಲು ಈ ಸಂಚಲನಾತ್ಮಕ ತೀರ್ಪು ನೀಡಿದ್ದಾರೆ, (ಏಜೆನ್ಸೀಸ್).