ಮುಂದುವರೆದು, 'ಭ್ರಷ್ಟ, ಅಸಮರ್ಥ ಮತ್ತು ಹಾದಿತಪ್ಪಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಮೊದಲು ವಜಾಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಮೊದಲ ಬೇಡಿಕೆಯಾಗಿದೆ. ಪ್ರಧಾನಿ ಮೋದಿ ಸಂಪುಟದಲ್ಲಿ ಪ್ರಧಾನ್ ಅವರನ್ನು ವಜಾ ಮಾಡುವುದಕ್ಕೆ ಬದಲಾಗಿ ಬೇರೆ ಖಾತೆಗೆ ಬದಲಾಯಿಸುವ ಯೋಚನೆ ನಡೆಯುತ್ತಿದೆ, ಇದು ದೇಶದ ವಿದ್ಯಾರ್ಥಿಗಳಿಗೆ ಹಾಗೂ ಯಾರಿಗೂ ಸ್ವೀಕಾರಾರ್ಹವಲ್ಲ. ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ನಾಶದ ಸಂಕೇತವಾಗಿದ್ದಾರೆ' ಎಂದು ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಗುಡುಗಿದರು.