ಆಟೋಮೊಬೈಲ್ ತಯಾರಕರು ಇನ್ನು ಮುಂದಾದರೂ ಜೈವಿಕ ಇಂಧನಗಳು, ಸಿಎನ್‌ಜಿ (CNG), ಎಲ್‌ಎನ್‌ಜಿ (LNG) ಮತ್ತು ವಿದ್ಯುತ್ ಚಾಲಿತ ವಾಹನಗಳತ್ತ (Electric Powertrains) ಗಮನ ಹರಿಸಬೇಕು ಎಂದು ಗಡ್ಕರಿ ಒತ್ತಾಯಿಸಿದ್ದು, ಈ ಬದಲಾವಣೆಯು ಕೇವಲ ಪರಿಸರ ರಕ್ಷಣೆಯಷ್ಟೇ ಅಲ್ಲದೆ, ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ದೊಡ್ಡ ಕೊಡುಗೆ ನೀಡಲಿದೆ ಎಂದರು. ನಾವು ಪ್ರಸ್ತುತ ಹೈಡ್ರೋಜನ್ ಟ್ರಕ್‌ಗಳು ಮತ್ತು ಬಸ್‌ಗಳನ್ನು ಓಡಿಸಲು 10 ಮಾರ್ಗಗಳನ್ನು ಗುರುತಿಸಿದ್ದು, ಹೈಡ್ರೋಜನ್ ಮುಂದಿನ ದಿನಗಳ ಭವಿಷ್ಯದ ಇಂಧನವಾಗಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಮೋಟಾರ್ಸ್, ವೋಲ್ವೋ, ಅಶೋಕ್ ಲೇಲ್ಯಾಂಡ್ ಮತ್ತು ಮಹೀಂದ್ರಾದಂತಹ ಪ್ರಮುಖ ಕಂಪನಿಗಳು ಈಗಾಗಲೇ ಈ ತಂತ್ರಜ್ಞಾನದ ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂಬ ಮಾಹಿತಿ ನೀಡಿದರು.