ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಅಥವಾ AQI ನವೆಂಬರ್‌ನಿಂದ ತುಂಬಾ ಕಳಪೆ ಮಟ್ಟದಲ್ಲಿದೆ. ಬುಧವಾರ ಸಂಜೆ 4 ಗಂಟೆಗೆ, ನಗರದ 24-ಗಂಟೆಗಳ ಸರಾಸರಿ AQI 334 ರಷ್ಟಿದ್ದು, ಮಂಗಳವಾರದ 354 ಕ್ಕಿಂತ ಸ್ವಲ್ಪ ಉತ್ತಮವಾಗಿದ್ದರೂ ಇದನ್ನು ತುಂಬಾ ಕಳಪೆ ವರ್ಗದಲ್ಲೇ ಇರಿಸಲಾಗಿದೆ. ಇನ್ನು ವಾಯು ಮಾಲಿನ್ಯ ಮಿತಿಮೀರಿರುವುದರಿಂದ ರಾಜಧಾನಿಯಲ್ಲಿ ಪ್ರಾಥಮಿಕ ಶಾಲೆಗಳ ದೈಹಿಕ ತರಗತಿಗಳನ್ನು ನಿಲ್ಲಿಸಲಾಗಿದ್ದು ಆನ್ಲೈನ್ನಲ್ಲಿ ತರಗತಿಗಳು ನಡೆಯುತ್ತಿವೆ. ಅಲ್ಲದೆ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ಆನ್‌ಲೈನ್ ಅಥವಾ ದೈಹಿಕ ತರಗತಿಗಳಲ್ಲಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಚೇರಿಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ, (ಏಜೆನ್ಸೀಸ್).