ಪ್ರಮಾಣವಚನ ಕಾರ್ಯಕ್ರಮದ ಮರುದಿನ ಭಾರತದಲ್ಲಿರುವ ಇರಾನ್ ರಾಯಭಾರಿ ತಮ್ಮನ್ನು ಎಚ್ಚರಗೊಳಿಸಿದಾಗ, ಹನಿಯೆ ಹತ್ಯೆಯಾಗಿದೆ ಎಂದು ತಿಳಿಯಿತು ಎನ್ನುವುದನ್ನು ಗಡ್ಕರಿ ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ನಾನು ನನ್ನ ಹೋಟೆಲ್‌ಗೆ ಹಿಂತಿರುಗಿದೆ, ಬೆಳಿಗ್ಗೆ 4 ಗಂಟೆ ಸುಮಾರಿಗೆ, ಭಾರತದಲ್ಲಿನ ಇರಾನಿನ ರಾಯಭಾರಿ ನನ್ನ ಬಳಿಗೆ ಬಂದು ನಾವು ಹೊರಡಬೇಕು ಎಂದು ಹೇಳಿದರು. ಏನಾಯಿತು ಎಂದು ನಾನು ಅವರನ್ನು ಕೇಳಿದ್ದಕ್ಕೆ, ಹಮಾಸ್ ಮುಖ್ಯಸ್ಥನನ್ನು ಹತ್ಯೆ ಮಾಡಲಾಗಿದೆ ಎಂದು ಉತ್ತರಿಸಿದರು. ಇದನ್ನು ಕೇಳಿ ನನಗೆ ಆಘಾತವಾಯಿತು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.