ಮೇಷ: ಆರೋಗ್ಯ ಸುಧಾರಿಸಲಿದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ನೆಮ್ಮದಿ ನೀಡುವ ಧಾರ್ವಿುಕ ಕಾರ್ಯದಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ: 9 .ವೃಷಭ: ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳಿತನ್ನು ಉಂಟುಮಾಡುತ್ತದೆ. ಶುಭಸಂಖ್ಯೆ:6.ಮಿಥುನ: ಹೊಸ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಂಡುಬವುದು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೃಷಿಕರಿಗೆ ಪ್ರವಾಸ ಯೋಗ. ಶುಭಸಂಖ್ಯೆ:2.ಕಟಕ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:3.ಸಿಂಹ: ಉದ್ಯೋಗದಲ್ಲಿ ಶುಭಸುದ್ದಿ ಸಿಗುವ ಸಾಧ್ಯತೆ. ಕುಟುಂಬದ ಹಿರಿಯರ ಬೆಂಬಲ ನಿಮಗಿರುತ್ತದೆ. ಕಾರು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:6.ಕನ್ಯಾ: ಕೆಲಸದ ಒತ್ತಡ ಹೆಚ್ಚಿದ್ದರೂ ನಿಗದಿತ ಗುರಿ ತಲುಪುವಿರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆಲೋಚಿಸಿ ಹೆಜ್ಜೆ ಇಡಿ. ಶುಭಸಂಖ್ಯೆ:3.ತುಲಾ: ಹಳೆಯ ಸಮಸ್ಯೆಗಳು ಬಗೆಹರಿಯಲಿವೆ. ಕಲಾವಿದರಿಗೆ ಸಮಾಜದಲ್ಲಿ ವಿಶೇಷ ಗೌರವ. ಪಾಲುದಾರಿಕೆಯಲ್ಲಿ ಆರ್ಥಿಕ ಸ್ಥಿತಿ ಸ್ಥಿರ. ಶುಭಸಂಖ್ಯೆ:9.ವೃಶ್ಚಿಕ: ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಸಾಹಿತಿಗಳು, ಹೋರಾಟಗಾರರಿಗೆ ಧನ ಲಾಭ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ.ಶುಭಸಂಖ್ಯೆ:7.ಧನಸ್ಸು: ಮಕ್ಕಳಿಂದ ಶುಭ ವಾರ್ತೆ. ಹೊಸ ಯೋಜನೆ ಆರಂಭಿಸಲು ಸುಸಮಯ. ಹೋಟೆಲ್ ವ್ಯವಹಾರದಲ್ಲಿ ಗಣನೀಯ ಧನ ಲಾಭ. ಶುಭಸಂಖ್ಯೆ:4.ಮಕರ: ರಫ್ತು ವ್ಯವಹಾರದಲ್ಲಿ ಪ್ರಗತಿ. ಮನೆಯ ವಾತಾವರಣ ಸುಖವಾಗಿರಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಯಲ್ಲಿ ನೆಮ್ಮದಿ. ಶುಭಸಂಖ್ಯೆ:2.ಕುಂಭ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಲಿದೆ. ಸಣ್ಣ ಪ್ರಯಾಣ ಲಾಭದಾಯಕ. ಗೃಹ ನಿರ್ವಣಕ್ಕೆ ಬಂಧುಗಳ ಸಹಕಾರ ಸಿಗಲಿದೆ. ಶುಭಸಂಖ್ಯೆ:7.ಮೀನ: ಮಾತಿನಲ್ಲಿ ಮಾಧುರ್ಯವಿದ್ದರೆ ಕೆಲಸಗಳು ಸುಲಭವಾಗುತ್ತವೆ. ಆರ್ಥಿಕವಾಗಿ ಉತ್ತಮ ದಿನವಾಗಿದ್ದು, ನೆಮ್ಮದಿ ದೊರೆಯಲಿದೆ. ಶುಭಸಂಖ್ಯೆ: 5