ಈ ಬಗ್ಗೆ ಸಿಡ್ಬಿ (SIDBI) ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ 37ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ, ಭಾರತದ ಆರ್ಥಿಕತೆಯು ಅತ್ಯಂತ ಸಕಾರಾತ್ಮಕವಾಗಿದ್ದು, ಯಾವುದೇ ಆಘಾತಗಳನ್ನು ತಡೆದುಕೊಳ್ಳುವಷ್ಟು ಸದೃಢವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದ ಸಾಧನೆಗಳನ್ನು ಕುಗ್ಗಿಸಿ ಜನರಲ್ಲಿ ಅನಗತ್ಯ ಭಯ ಬಿತ್ತುತ್ತಿರುವ ವಿಪಕ್ಷಗಳ ನಕಾರಾತ್ಮಕ ಧೋರಣೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಮನವಿಗಳ ನಂತರ ದೇಶದಲ್ಲಿ ಒಂದು ವರ್ಗವು ಹತಾಶೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.