ವಿದ್ಯಾರ್ಥಿಗಳ ರಕ್ಷಣೆಗೆ ಬಂದ ನಿಹಾಂಗ್ಗಳ ಜೊತೆ CJP ಕಿರಿಕ್: 'ಇವರು ಪೊಲೀಸರ ಜೊತೆ ಸೇರಿದ್ದಾರೆ' ಆರೋಪಕ್ಕೆ ಸಿಖ್ ವೀರರ ಉತ್ತರವೇನು? Nihang Sikhs on CJP
ದೆಹಲಿಯ ನೀಟ್ ಪ್ರತಿಭಟನೆಯಲ್ಲಿ ಸಿಜೆಪಿ ಕಾರ್ಯಕರ್ತರು ಮತ್ತು ನಿಹಾಂಗ್ ಸಿಖ್ಗಳ ನಡುವೆ ವಾಗ್ವಾದ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೆಹಲಿಯ ನೀಟ್ ಪ್ರತಿಭಟನೆಯಲ್ಲಿ ಸಿಜೆಪಿ ಕಾರ್ಯಕರ್ತರು ಮತ್ತು ನಿಹಾಂಗ್ ಸಿಖ್ಗಳ ನಡುವೆ ವಾಗ್ವಾದ!
ಪೊಲೀಸರ ಜೊತೆ ಶಾಮೀಲಾಗಿದ್ದಾರೆಂಬ ಆರೋಪಕ್ಕೆ ನಿಹಾಂಗ್ ಪಡೆ ತಿರುಗೇಟು
ಇಲ್ಲಿ ನೀಟ್ ಸಲುವಾಗಿ ಹೋರಾಟ ನಡೆಯುತ್ತಲೇ ಇಲ್ಲವೆಂಬ ಆರೋಪ
ನವದೆಹಲಿ: ಕಳೆದೊಂದು ತಿಂಗಳಿನಿಂದ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನೀಟ್ ಸೇರಿದಂತೆ ದೇಶದಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಸೋಮವಾರ (ಜು.20) ಈ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡು, ಜಂತರ್-ಮಂತರ್ನಿಂದ ಸಂಸತ್ ಭವನದವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗವನ್ನು ನಡೆಸಲಾಯಿತು. ಈ ಘಟನೆ ಬೆನ್ನಲ್ಲೆ ಸಿಖ್ ಸಮುದಾಯದ ಯೋಧರೆಂದೆ ಕರೆಯಲಾಗುವ ನಿಹಾಂಗ್ ಸಿಖ್(Nihang Sikhs on CJP) ಗಳು ಈ ಹೋರಾಟವನ್ನು ಬೆಂಬಲಿಸಿ ಜಂತರ್-ಮಂತರ್ಗೆ ಆಗಮಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟಕ್ಕೆ ಬೆಂಬಲಿಸಿ ತಮ್ಮ ಸಹಕಾರವನ್ನು ನೀಡಲು ಬಂದ ನಿಹಾಂಗ್ ಸಿಖ್ಗಳಿಗೆ ಹಾಗೂ ಕಾಕ್ರೋಚ್ ಪಾರ್ಟಿ ಕಾರ್ಯಕರ್ತರ ನಡುವೆ ಜಗಳ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಡೆದಿರುವ ಘರ್ಷಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೊದಲು ಕಾಕ್ರೋಚ್ ಪಾರ್ಟಿಯ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದ ನಿಹಾಂಗ್ ಸಿಖ್ಗಳು ನಂತರದಲ್ಲಿ ಪೊಲೀಸರ ಜೊತೆಗೆ ಸೇರಿಕೊಂಡಿದ್ದಾರೆ ಎನ್ನುವುದು ಕಾಕ್ರೋಚ್ ಪಾರ್ಟಿ ಅವರ ವಾದವಾಗಿದೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ನಿಹಾಂಗ್ ಸಿಖ್ರು, ನಾವು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಇಲ್ಲಿದೆ ಬಂದಿದ್ದೆವೆ. ನಾವು ಬರುವ ಮೊದಲು ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದರು, ನಮ್ಮ ಪ್ರವೇಶದೊಂದಿದೆ ಅದು ನಿಂತಿದೆ.
ಆದರೆ ನಿನ್ನೆ ರಾತ್ರಿ ಪ್ರತಿಭಟನಾಕಾರರೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ನಮ್ಮ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ನಾವು ಸಿಜೆಪಿ ಕಾರ್ಯಕರ್ತರ ಜೊತೆ ವಾಗ್ವಾದ ನಡೆಸಿದ್ದೆವೆ ಎಂದು ಹೇಳಿದ್ದಾರೆ, (ಏಜನ್ಸೀಸ್).