ಜಾರ್ಖಂಡ್​ನಲ್ಲಿ ಐಸಿಸ್ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ; ಉಗ್ರಕೃತ್ಯಕ್ಕೆ ಬಳಸಲಾಗುವ ವಸ್ತುಗಳ ವಶ | NIA

NIA
NIA
Published on

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದಕ ಜಾಲದೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿ ಮನೆ ಮೇಲೆ ಎನ್​ಐಎ ದಾಳಿ
  • ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಭಯೋತ್ಪಾದಕ ಸಂಪರ್ಕಕ್ಕೆ ಬಳಸಲಾಗಿದ್ದ ಇತರ ವಸ್ತುಗಳನ್ನು ವಶ
ಜಾರ್ಖಂಡ್​ : ಶುಕ್ರವಾರ (ಡಿ.12) ಐಸಿಸ್ ಭಯೋತ್ಪಾದಕ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ವ್ಯಕ್ತಿಯೊಬ್ಬನ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಐಎ ತಂಡ ಗುರುವಾರ(ಡಿ. 11) ಅನ್ಸಾರ್ ನಗರ ಪ್ರದೇಶದಲ್ಲಿರುವ ಶಹನವಾಜ್ ಆಲಂ ಅವರ ಮನೆಯ ಮೇಲೆ ದಾಳಿ ನಡೆಸಿ, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಭಯೋತ್ಪಾದಕ ಸಂಪರ್ಕಕ್ಕೆ ಬಳಸಲಾಗಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಎನ್‌ಐಎ ತಂಡವು ದಾಳಿ ನಡೆಸಿದೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ದೃಢಪಡಿಸಿದ್ದು, ಎನ್‌ಐಎ ಈ ಹಿಂದೆ ಬಂಧಿಸಿದ್ದ ವೈದ್ಯರೊಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.ಮೂಲತಃ ಹಜಾರಿಬಾಗ್‌ನವನಾದ ಶಹನವಾಜ್ ಆಲಂನನ್ನು ಅಕ್ಟೋಬರ್ 2023 ರಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿತ್ತು. 2019 ರಲ್ಲಿ ದರೋಡೆ ಮತ್ತು ಕಳ್ಳತನಕ್ಕಾಗಿ ಜೈಲಿನಲ್ಲಿದ್ದ ಶಹನವಾಜ್‌ನ ಹಿನ್ನೆಲೆಯನ್ನು ಸಹ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಡಿಸೆಂಬರ್ 2020 ರಲ್ಲಿ ಜಾಮೀನು ಪಡೆದ ನಂತರ, ಅವರು ಐಸಿಸ್ ನಿರ್ವಾಹಕರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ.ಶಹನವಾಜ್ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಗಳು ಜಾರ್ಖಂಡ್‌ನಲ್ಲಿ ಇನ್ನೂ ಸಕ್ರಿಯರಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net