NHAI Toll Rules 2026 : ಏ.10ರ ನಂತರ ಹೈವೇನಲ್ಲಿ ಸಂಚರಿಸುವ ಮುನ್ನ ಎಚ್ಚರ!

NHAI Toll Rules 2026
NHAI Toll Rules 2026
Published on
NHAI Toll Rules 2026: ದೇಶಾದ್ಯಂತ ಇರುವ ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ. ಏಪ್ರಿಲ್ 10 ರಿಂದ ಹೆದ್ದಾರಿ ಪ್ರಯಾಣ ಸಂಪೂರ್ಣ ಡಿಜಿಟಲ್ ಆಗಲಿದ್ದು, ಫಾಸ್ಟ್ಯಾಗ್ (FASTag) ಮತ್ತು ಯುಪಿಐ (UPI) ಮಾತ್ರ ಚಾಲ್ತಿಯಲ್ಲಿರಲಿವೆ.

ನಗದು ನೀಡುವಂತಿಲ್ಲ, ಯುಪಿಐ ಬೆಲೆ ದುಬಾರಿ!

ಹೊಸ ನಿಯಮದ ಪ್ರಕಾರ, ಏಪ್ರಿಲ್ 10 ರಿಂದ ಟೋಲ್ ಬೂತ್‌ಗಳಲ್ಲಿ ನಗದು ಸ್ವೀಕರಿಸಲಾಗುವುದಿಲ್ಲ. ವಾಹನಗಳಲ್ಲಿ ಮಾನ್ಯವಾದ ಫಾಸ್ಟ್ಯಾಗ್ ಇರುವುದು ಕಡ್ಡಾಯ. ಒಂದು ವೇಳೆ ನಿಮ್ಮಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದರೆ ಅಥವಾ ಅದರಲ್ಲಿ ಹಣವಿಲ್ಲದಿದ್ದರೆ, ನೀವು ಯುಪಿಐ ಮೂಲಕ ಪಾವತಿಸಬಹುದು. ಆದರೆ ನೆನಪಿರಲಿ, ಯುಪಿಐ ಮೂಲಕ ಪಾವತಿಸುವಾಗ ಸಾಮಾನ್ಯ ಟೋಲ್ ದರಕ್ಕಿಂತ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಇದು ಫಾಸ್ಟ್ಯಾಗ್ ಬಳಕೆದಾರರಿಗೆ ಉತ್ತೇಜನ ನೀಡಲು ಕೈಗೊಂಡ ಕ್ರಮವಾಗಿದೆ.

3ದಿನದೊಳಗೆ ದಂಡ ಪಾವತಿಸದಿದ್ದರೆ ಡಬಲ್ ಫೈನ್!

ಒಂದು ವೇಳೆ ವಾಹನ ಸವಾರರು ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸಿದರೆ, ಅವರಿಗೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಅಡಿಯಲ್ಲಿ ಪ್ರವೇಶ ನಿರಾಕರಿಸಬಹುದು. ಅಲ್ಲದೆ, ಇ-ನೋಟಿಸ್ ಜಾರಿಗೊಳಿಸಲಾಗುತ್ತದೆ. ನೋಟಿಸ್ ಬಂದ ಮೂರು ದಿನಗಳೊಳಗೆ ಬಾಕಿ ಹಣ ಪಾವತಿಸದಿದ್ದರೆ, ದಂಡದ ಮೊತ್ತವು ದುಪ್ಪಟ್ಟಾಗಲಿದೆ ಎಂದು NHAI ಎಚ್ಚರಿಸಿದೆ.

ಐಡಿ ಕಾರ್ಡ್ ತೋರಿಸಿ ಉಚಿತ ಪ್ರಯಾಣಕ್ಕೆ ಬ್ರೇಕ್!

ಟೋಲ್ ಪ್ಲಾಜಾಗಳಲ್ಲಿ ಸರ್ಕಾರಿ ಐಡಿ ಕಾರ್ಡ್‌ಗಳನ್ನು ತೋರಿಸಿ ಖಾಸಗಿ ವಾಹನಗಳಲ್ಲಿ ಉಚಿತವಾಗಿ ಸಂಚರಿಸುವ ಪದ್ಧತಿಗೆ ಈಗ ಎಳ್ಳುನೀರು ಬಿಡಲಾಗಿದೆ. ಇನ್ಮುಂದೆ ಕೇವಲ 'Exempted FASTag' ಹೊಂದಿರುವ ಅಧಿಕೃತ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ಸಿಗಲಿದೆ. ಇದರಿಂದ ಟೋಲ್ ಸಿಬ್ಬಂದಿ ಮತ್ತು ಸವಾರರ ನಡುವಿನ ವಾದ-ವಿವಾದಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಫಾಸ್ಟ್ಯಾಗ್ ವಾರ್ಷಿಕ ಪಾಸ್ (Annual Pass) ಪ್ರಯೋಜನಗಳು

ಪದೇ ಪದೇ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ವಾರ್ಷಿಕ ಪಾಸ್ ಹೆಚ್ಚು ಲಾಭದಾಯಕವಾಗಿದೆ. ಖಾಸಗಿ ವಾಹನಗಳಿಗೆ 3,075 ರೂ. ಬೆಲೆ ನಿಗದಿ ಮಾಡಲಾಗಿದೆ.ಅಲ್ಲದೆ, ಒಂದು ವರ್ಷದ ಅವಧಿ ಅಥವಾ 200 ಬಾರಿ ಟೋಲ್ ದಾಟುವವರೆಗೆ (ಯಾವುದು ಮೊದಲೋ ಅದು).
ಅಪ್ಲೈ ಮಾಡುವುದು ಹೇಗೆ?: ಸವಾರರು 'ರಾಜಮಾರ್ಗ ಯಾತ್ರೆ' (Rajmarg Yatra) ಆ್ಯಪ್ ಅಥವಾ NHAI ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಪಾವತಿ ಮಾಡಿದ 24 ಗಂಟೆಗಳ ಒಳಗೆ ಈ ಪಾಸ್ ಸಕ್ರಿಯಗೊಳ್ಳುತ್ತದೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net