ಕಟ್ಟಡ ಕುಸಿಯಲಿದೆ ಎಂದು ಮಾಲೀಕನಿಗೆ ಮೊದಲೇ ತಿಳಿದಿತ್ತು: ದೆಹಲಿ ಪಿಜಿ ದುರಂತಕ್ಕೆ ಹೊಸ ಟ್ವಿಸ್ಟ್​; ಎಫ್​ಐಆರ್​ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ! Delhi PG Collapse

ದೆಹಲಿಯಲ್ಲಿ ಕುಸಿದುಬಿದ್ದ ಪಿಜಿ ಕಟ್ಟಡದ ಅವಶೇಷಗಳು ಮತ್ತು ರಕ್ಷಣಾ ಕಾರ್ಯಾಚರಣೆಯ ಸ್ಥಳ.
ದೆಹಲಿಯಲ್ಲಿ ಕುಸಿದುಬಿದ್ದ ಪಿಜಿ ಕಟ್ಟಡದ ಅವಶೇಷಗಳು ಮತ್ತು ರಕ್ಷಣಾ ಕಾರ್ಯಾಚರಣೆಯ ಸ್ಥಳ.
Published on
ನವದೆಹಲಿ: ದೆಹಲಿ ವಿಶ್ಯವಿದ್ಯಾಲಯದ ಸಮೀಪದಲ್ಲಿರುವ ಸತ್ಯ ನಿಕೇತನ ಪಿಜಿ ಕುಸಿತ (Delhi PG Collapse) ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಾದ ಹರಿ ರಾಮ ಗುಪ್ತಾ, ಮಗ ಮಹೇಶ್​ ಮತ್ತು ಪತ್ನಿ ಊರ್ಮಿಳಾರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ (ಸೆ.6) ರಂದು ಈ ಕಟ್ಟಡ ಕುಸಿದ ಪರಿಣಾಮ ಸುಮಾರು 7 ಜನ ಸಾವನ್ನಪ್ಪಿದ್ದು, ಹತ್ತಾರು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆಂದು ತಿಳಿದು ಬಂದಿದೆ. ಈಗಲೂ ಕೂಡ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ.

ಎಫ್​ಐಆರ್​ನಲ್ಲಿ ಸ್ಫೋಟಕ ಮಾಹಿತಿ ಬಯಲು!

ರಾಜಸ್ಥಾನ ಮೂಲದ ಹರಿ ರಾಮ ಬನ್ಸಲ್​ ಅಲಿಯಾಸ್​ ಗುಪ್ತಾ ಮೇಲೆ ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು, ಕಟ್ಟಡ ನಾಲ್ಕು ಅಂತಸ್ತನ್ನು ಹೊರುವ ಸಾಮರ್ಥ್ಯವನ್ನು ಹೊಂದಿಲ್ಲವೆಂದು ಮಾಲೀಕನಿಗೆ ಮೊದಲೇ ತಿಳಿದಿತ್ತು, ಆದರೆ ಅಧಿಕ ಹಣದ ಗಳಿಕೆ ಉದ್ದೇಶದಿಂದ ಮಾಲೀಕ ಯಾವುದೇ ಸುರಕ್ಷಾ ಕ್ರಮವನ್ನು ಕೈಗೊಳ್ಳಲು ಮುಂದಾಗಿಲ್ಲವೆಂದು ನಮೂದಿಸಿದ್ದಾರೆ.
ಕಟ್ಟಡದ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳಿಗೆ ಬಾಡಿಗೆ!
ಕುಸಿತ ಕಂಡಿರುವ ಸತ್ಯ ನಿಕೇತನ ಪಿಜಿ ರಚನೆಯಲ್ಲಿ ಬಹಳ ದುರ್ಬಲವಾಗಿತ್ತು. ಆದರೂ ಹೆಚ್ಚಿನ ಬಾಡಿಗೆ ಪಡೆಯುವ ಉದ್ದೇಶದಿಮದ ಹರಿ ಗುಪ್ತಾ ನಾಲ್ಕು ಮಹಡಿಯನ್ನು ಕಟ್ಟಿಸಿದ್ದರು. ಅಂತೆಯೇ ಪ್ರತಿ ಕೊಠಡಿಯಲ್ಲಿ ಸಾಮರ್ಥ್ಯಕ್ಕಿಂತ ಹಚ್ಚಿನ ವಿದ್ಯಾರ್ಥಿಗಳಿಗೆ ಬಾಡಿಗೆ ನೀಡಿದ್ದರು. ಮೊದಲೇ ಕಟ್ಟಡ ರಚನಾತ್ಮಕವಾಗಿ ದುರ್ಬಲವಾಗಿತ್ತು, ಅದರ ಜೊತೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳು ವಾಸವಿದ್ದ ಕಾರಣದಿಂದಲೇ ಕಟ್ಟಡ ಕುಸಿತವಾಗಿದೆ ಎಂದು ಪೊಲೀಸರು ಎಫ್​​ಐಆರ್​ನಲ್ಲಿ ನಮೂದಿಸಿದ್ದಾರೆಂದು ತಿಳಿದು ಬಂದಿದೆ.
ಹೈಕೋರ್ಟ್​ ತರಾಟೆ!
ಈ ಪ್ರಕರಣದ ಕುರಿತು ದಾಖಲಾಗಿರುವ ಅರ್ಜಿ ವಿಚಾರಣೆ ನಡೆಸಿದ ದೇವೇಂದ್ರ ಕುಮಾರ್​ ಉಪಾಧ್ಯಯ ಮತ್ತು ತೇಜಸ್​ ಕರಿಯ ಅವರ ನ್ಯಾಯಪೀಠ, ರಾಷ್ಟ್ರ ರಾಜಧಾನಿಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರಾಜ್ಯ ಸರ್ಕಾರ, ಪಾಲಿಕೆ ಹಾಗೂ ದೆಹಲಿ ವಿಶ್ವವಿದ್ಯಾಲಯಕ್ಕೆ ತರಾಟೆಗೆ ತೆಗೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂರು ಸಂಸ್ಥೆಗಳು ಪ್ರತ್ಯೇಕ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್​ ನಿರ್ದೇಶನ ನೀಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net