ಲಕ್ನೋದಿಂದ ಹೊರಟ ಮೊದಲ ಹಾರಾಟದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಸಂಪೂರ್ಣ ಬುಕ್ ಆಗಿದ್ದು, ಈ ಐತಿಹಾಸಿಕ ಪ್ರಯಾಣದಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಪಿ. ಗೋಯಲ್ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದಾರೆ. ಮತ್ತೊಂದೆಡೆ, ಜೇವರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ಮೋಹನ್ ನಾಯ್ಡು, ಸಂಸದ ಮಹೇಶ್ ಶರ್ಮಾ ಹಾಗೂ ಸ್ಥಳೀಯ ಶಾಸಕ ಧೀರೇಂದ್ರ ಸಿಂಗ್ ಅವರು ವಿಮಾನವನ್ನು ಬರಮಾಡಿಕೊಂಡರು. ಈ ಸಂಪರ್ಕವು ರಾಜ್ಯದ ಆಡಳಿತಾತ್ಮಕ ಮತ್ತು ವಾಣಿಜ್ಯ ಕೇಂದ್ರಗಳ ನಡುವಿನ ಆರ್ಥಿಕ ಬಾಂಧವ್ಯವನ್ನು ಬಲಪಡಿಸಲಿದೆ.