1920ರ ಬ್ರಿಟಿಷ್ ಆಡಳಿತಾವಧಿಯಲ್ಲಿ ನೇತಾಜಿ ಬೋಸ್ ಸಂಸ್ಕೃತ ಭಾಷೆಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು: ಪ್ರಧಾನಿ ಮೋದಿ | PM Modi

ಬ್ರಿಟಿಷರ ಆಳ್ವಿಕೆಯಿದ್ದ 1920ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on: 

ನವದೆಹಲಿ: ಬ್ರಿಟಿಷರ ಆಳ್ವಿಕೆಯಿದ್ದ 1920ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ (UPSC) ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ಲಕ್ಷಾಂತರ ಯುವಜನರ ಆಕಾಂಕ್ಷೆಗಳ ಸಂಭ್ರಮಾಚರಣೆ ಎಂದು ಬಣ್ಣಿಸಿದರು.

ಪ್ರತಿಯೊಬ್ಬ ಭಾರತೀಯರೂ ಈ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಸಂಭ್ರಮವಿದು. ಶತಮಾನದಷ್ಟು ದೀರ್ಘವಾದ ಈ ಪಯಣದಲ್ಲಿ ತಲೆಮಾರುಗಳು ಬದಲಾದವು, ಸರ್ಕಾರಗಳು ಬದಲಾದವು, ತಂತ್ರಜ್ಞಾನ ಬದಲಾಯಿತು ಮತ್ತು ಪಠ್ಯಕ್ರಮಗಳು ಬದಲಾದವು, ಆದರೂ ಯುಪಿಎಸ್‌ಸಿ ಮೇಲಿನ ನಂಬಿಕೆ ಇಂದಿಗೂ ಅಷ್ಟೇ ಅಚಲವಾಗಿ ಉಳಿದಿದೆ. ಇದೇ ನಿಮ್ಮ ಅತ್ಯಂತ ದೊಡ್ಡ ಸಂಪತ್ತಾಗಿದೆ ಎಂದು ಹೇಳಿದ್ದಾರೆ.

Also Read
2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾಗೆ ಒಂದೇ ಗುಂಪಿನಲ್ಲಿ ಸ್ಥಾನ | 2027 ODI World Cup
ಪ್ರಧಾನಿ ನರೇಂದ್ರ ಮೋದಿ

ಗ್ಯಾಲರಿಯನ್ನು ವೀಕ್ಷಿಸುತ್ತಿದ್ದಾಗ, 1920ರಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕೂಡ ಇದೇ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮತ್ತು ಸಂಬಂಧಿಸಿದ ವಿವರಗಳನ್ನು ನಾನು ನೋಡಿದೆ. ಆ ಸಮಯದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದರೂ ಸಂಸ್ಕೃತ ವಿಷಯದ ಪರೀಕ್ಷೆಯೂ ಇತ್ತು. ಮತ್ತು ಸುಭಾಷ್ ಬಾಬು ಅವರು ಸಂಸ್ಕೃತದಲ್ಲಿಯೇ ಪರೀಕ್ಷೆ ಬರೆದಿದ್ದರು ಎಂಬುದು ನನ್ನ ಗಮನ ಸೆಳೆಯಿತು ಎಂದು ತಿಳಿಸಿದ್ದಾರೆ.

ಯುಪಿಎಸ್​ಸಿ ಸಂಸ್ಥೆಯು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಹುಟ್ಟಿಕೊಂಡಿದ್ದನ್ನು ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅದು ವಿಕಸನಗೊಂಡಿದ್ದನ್ನು ಹೋಲಿಸಿ ಮಾತನಾಡಿದ ಅವರು, ಸ್ವತಂತ್ರ ರಾಷ್ಟ್ರದ ಕನಸುಗಳನ್ನು ಸಾಕಾರಗೊಳಿಸುವತ್ತ ಸಂಸ್ಥೆಯು ಯಶಸ್ವಿಯಾಗಿ ನಡೆಸುತ್ತಿದೆ ಎಂದರು. ಮತ್ತು ತನ್ನ ಐತಿಹಾಸಿಕ ಕರ್ತವ್ಯಗಳನ್ನು ನಿರ್ವಹಿಸಿರುವಂತೆಯೇ, ಮುಂದಿನ 25 ವರ್ಷಗಳತ್ತ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net